ಹುಬ್ಬಳ್ಳಿ; ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿಕೊಡಲು ಭಾರತೀಯ ಜನತಾ ಪಕ್ಷದಜೊತೆಗೆ ಜಾತ್ಯಾತೀತ ಜನತಾದಳ ಮೈತ್ರಿ ಮಾಡಿಕೊಳ್ಳಲಾಗಿದೆ ಎಂಬ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆಯನ್ನ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಮರ್ಥನೆ ಮಾಡಿಕೊಂಡರು.
ನಗರದ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆಗೆ ನನ್ನ ಸಹಮತ ಇದ್ದು ಎಂಬ ಹೇಳಿಕೆ ಮೂಲಕ ಮೈತ್ರಿ ಬಗ್ಗೆ ತಮ್ಮ ನಿಲುವು ತಿಳಿಸಿಕೊಟ್ಟರು. ಇನ್ನೂ ಇಸ್ರೇಲ್ ನಲ್ಲಿ ರಾಜ್ಯದ ಜನತೆ ಸಿಲುಕಿಕೊಂಡು ಕುರಿತು ರಕ್ಷಣಾ ಕಾರ್ಯ ನಡೆದಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಸಿಲುಕಿಕೊಂಡವರ ಕರೆತರುವ ಕೆಲಸ ನಡೆದಿದೆ ಯಾವುದೇ ತೊಂದರೆ ಇಲ್ಲ ಎಂದರು. ರಾಜ್ಯದಲ್ಲಿ ಬರ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆದಿದ್ದು ಇಂದು ಪ್ರಗತಿ ಪರಿಶೀಲನಾ ಸಭೆ ಕರೆಯಲಾಗಿದೆ
ಬರ ಕಾಮಗಾರಿ ಕುರಿತು ಚರ್ಚೆ ನಡೆಸಲಾಗುತ್ತಿದೆ ಈಗಾಗಲೇ ಸಚಿವ ಸಂಪುಟದ ಉಪ ಸಮಿತಿ ಸಭೆ ಆಗಿದೆ ಏನೆಲ್ಲಾ ಮಾಡಬೇಕು ಎಂಬ ಕುರಿತು ಸಚಿವ ಸಂಪುಟದ ಉಪ ಸಮಿತಿ ಮಾಹಿತಿ ಕೊಟ್ಟಿದೆ ಎಂದ ಅವರು ಶಾಸಕರು ಟಾಸ್ಕ್ ಫೋರ್ಸ್ ಅಧ್ಯಕ್ಷರು ಆಗಿದ್ದಾರೆ ಅವರ ನೇತೃತ್ವದಲ್ಲಿ ಜಿಲ್ಲಾ ಹಾಗೂ ಕ್ಷೇತ್ರವಾರು ಕಾಮಗಾರಿ ನಡೆಯಲಿವೆ ಎಂದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಡುವೆ ಲಘು ಟ್ರೃನ್ ಆರಂಭ ಬಗ್ಗೆ ಮಾಹಿತಿ ಇಲ್ಲ ಎಂದರು. ಪಟಾಕಿ ದುರಂತ ಕುರಿತು ಸಾಕಷ್ಟು ಆತಂಕಕಾರಿ ಬೆಳವಣಿಗೆ ನಡೆದ ಹಿನ್ನಲೆಯಲ್ಲಿ ಪಟಾಕಿ ಬ್ಯಾನ್ ಕುರಿತು ಜಿಲ್ಲಾಡಳಿತ ಜೊತೆಗೆ ಸಭೆ ನಡೆಸಲಾಗುತ್ತದೆ ಎಂದರು.
The post ಡಿ ಕೆ ಶಿವಕುಮಾರ್ ಜೈಲಿಗೆ ಕಳುಹಿಸಲು ಜೆಡಿಎಸ್ ಕಮಲ ಮೈತ್ರಿ: ಸಹಮತ ಸೂಚಿಸಿದ ಲಾಡ್ appeared first on Ain Live News.