Home Uncategorized ಡ್ರಗ್ ಪೆಡ್ಲರ್ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿಯಲ್ಲಿ...

ಡ್ರಗ್ ಪೆಡ್ಲರ್ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿಯಲ್ಲಿ ಸೆರೆ!

38
0

ಬೆಂಗಳೂರು: ನಗರದ ಹಲಸೂರು ಏರಿಯಾದ ವಿಕ್ರಮ್ (Vikram) ಹೆಸರಿನ ಯುವಕ ಒಬ್ಬ ಡ್ರಗ್ ಪೆಡ್ಲರ್ (drug peddler). ಎಲ್ಲ ಯುವಕರಂತೆ ಅವನು ಸಹ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಅದೊಂದು ದಿನ ಅವನು ಪ್ರೀತಿಸುತ್ತಿದ್ದ ಯುವತಿಗೆ ಅವನು ಮಾಡುತ್ತಿದ್ದ ದಂಧೆಯ ಬಗ್ಗೆ ಗೊತ್ತಾಗಿ ಅವನಿಗೆ ಬುದ್ಧಿ ಹೇಳಿದಳು. ಅವನಿಗೆ ಅವಳ ಮಾತು ರುಚಿಸಲಿಲ್ಲ, ಯಥಾರೀತಿ ತನ್ನ ಕಾನೂನಬಾಹಿರ (illegal) ಕೆಲಸ ಮುಂದುವರಿಸಿದ. ಡ್ರಗ್ ಪೆಡ್ಲರ್ ಗಳು ಎಷ್ಟೇ ಚಾಣಾಕ್ಷರಾದರೂ ಪೊಲೀಸರಿಂದ ತಪ್ಪಿಸಿಕೊಳ್ಳಲಾರರು. ಹಲಸೂರು ಪೊಲೀಸರು ವಿಕ್ರಮನನ್ನು ಬಂಧಿಸಿ ಜೈಲಿಗಟ್ಟಿದರು. ತಾನು ಪ್ರೀತಿಸುತ್ತಿದ್ದ ಹುಡುಗಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆಂದು ಭಾವಿಸಿದ ವಿಕ್ರಮ್ ಜೈಲಿಂದ ಹೊರಬಂದ ನಂತರ ಸೇಡು ತೀರಿಸಿಕೊಳ್ಳಲು ಅವಳ ದ್ವಿಚಕ್ರ ವಾಹನಕ್ಕೆ ಬೆಂಕಿಯಿಟ್ಟು ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಾಪತ್ತೆಯಾಗಿರುವ ವಿಕ್ರಮನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here