ತುಮಕೂರು: ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ ಮಾಡಿದ್ದಾರೆ. ತುಮಕೂರಿನಲ್ಲಿ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ಹರಿಸುವಂತೆ ಜಿಲ್ಲೆಯ ಸಚಿವದ್ವಯರಿಗೆ ಪತ್ರದ ಮೂಲಕ ಮಾಜಿ ಸಚಿವ ಸೊಗಡು ಶಿವಣ್ಣ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣಗೂ ಪತ್ರ ಬರೆದು ಮನವಿ ಮಾಡಿದ್ದಾರೆ. ಹೇಮಾವತಿ ನೀರು ತಮಿಳುನಾಡಿಗೆ ಬಿಡುತ್ತಿರು ವುದು ದುರಂತ.
ಕಳೆದ ತಿಂಗಳು ನೆಪ ಮಾತ್ರಕ್ಕೆ ತುಮಕೂರು ಜಿಲ್ಲೆಗೆ ಕೇವಲ 5 ಟಿ.ಎಮ್ ಸಿ ನೀರು ಬಿಟ್ಟು ಸ್ಥಗಿತಗೊಳಿಸಲಾಗಿದೆ.. ತಮಿಳುನಾಡಿಗೆ ಯಾವ ಪುರುಷಾರ್ಥಕ್ಕೆ ನೀರು ಹರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದು, ಇಡೀ ಜಿಲ್ಲೆ ಬರಗಾಲದಿಂದ ತತ್ತರಿಸಿದೆ. ಆದ್ದರಿಂದ ಇನ್ನುಳಿದ 20 ಟಿ.ಎಮ್.ಸಿ ನೀರು ಬಿಡುವಂತೆ ಆಗ್ರಹಿಸಿದ್ದಾರೆ.
The post ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ: ಸೊಗಡು ಶಿವಣ್ಣ ಒತ್ತಾಯ appeared first on Ain Live News.