Home ಕರ್ನಾಟಕ ತಲೆಕೆಳಗಾದ ಚುನಾವಣಾ ಸಮೀಕ್ಷೆ | ಟಿವಿ ಲೈವ್‌ನಲ್ಲೇ ಕಣ್ಣೀರು ಹಾಕಿದ ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್...

ತಲೆಕೆಳಗಾದ ಚುನಾವಣಾ ಸಮೀಕ್ಷೆ | ಟಿವಿ ಲೈವ್‌ನಲ್ಲೇ ಕಣ್ಣೀರು ಹಾಕಿದ ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ

9
0

ಹೊಸದಿಲ್ಲಿ : ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಅವರು 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ತಮ್ಮ ಲೆಕ್ಕಾಚಾರ ಮೀರುತ್ತಿದ್ದಂತೆ, ಇಂಡಿಯಾ ಟುಡೇ ಟಿ ವಿ ಲೈವ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಇಂಡಿಯಾ ಟುಡೆಯ ಚುನಾವಣಾ ಫಲಿತಾಂಶಗಳ ಲೈವ್ ಕವರೇಜ್‌ನಲ್ಲಿ ಕಾಣಿಸಿಕೊಂಡ ಗುಪ್ತಾ, ಕಣ್ಣೀರಿಡುತ್ತಿದ್ದಂತೆ ಆಂಕರ್ಗಳು ಅವರಿಗೆ ಸಾಂತ್ವನ ಹೇಳಿದರು.

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 361-401 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. INDIA ಒಕ್ಕೂಟವು 131-166 ಸ್ಥಾನಗಳನ್ನು ಗೆಲ್ಲಲಿದೆ, ಸಮೀಕ್ಷೆಗಳ ಪ್ರಕಾರ ಇತರ ಪಕ್ಷಗಳು 8 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿತ್ತು.

ಶನಿವಾರದ ಅಂತಿಮ ಸುತ್ತಿನ ಮತದಾನದ ನಂತರ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಎನ್‌ಡಿಎ ಮುನ್ನಡೆ ಸಾಧಿಸಲಿವೆ ಎಂದು ತೋರಿಸಿದ್ದವು.

ಇಂದು ಮತ ಎಣಿಕೆಯ ಬಳಿಕ INDIA ಒಕ್ಕೂಟ ಹೆಚ್ಚು ಸ್ಥಾನ ಗಳಿಸುತ್ತಿದ್ದಂತೆ ಚುನಾವಣಾ ಸಮೀಕ್ಷೆಗಳು ಸುಳ್ಳಾದವು. ಸಮೀಕ್ಷೆಗಳ ಸತ್ಯಾಸತ್ಯತೆಯ ಕುರಿತು ಪ್ರಶ್ನೆಗಳು ಏಳುತ್ತಿದ್ದಂತೆ ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಲೈವ್ ಕಾರ್ಯಕ್ರಮದಲ್ಲೇ ಕಣ್ಣೀರು ಹಾಕಿದ್ದಾರೆ.

LEAVE A REPLY

Please enter your comment!
Please enter your name here