Home ಕರ್ನಾಟಕ ತುಮಕೂರು| ಸಿದ್ದಗಂಗಾ ಮಠದ ಜಾತ್ರೆಗೆ ತೆರಳಿದ್ದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ: ಮೂವರು ಆರೋಪಿಗಳ ಬಂಧನ

ತುಮಕೂರು| ಸಿದ್ದಗಂಗಾ ಮಠದ ಜಾತ್ರೆಗೆ ತೆರಳಿದ್ದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ: ಮೂವರು ಆರೋಪಿಗಳ ಬಂಧನ

34
0
rape
Representational Image

ತುಮಕೂರು, ಮಾ.7: ಸಿದ್ಧಗಂಗಾ ಮಠದ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ವಯಸ್ಸಿನ ಪಿಯು ವಿದ್ಯಾರ್ಥಿನಿಯನ್ನು ಬಲವಂತವಾಗಿ ಕರೆದೊಯ್ದು ಸಾಮೂಹಿಕ ಅತ್ಯಾಚಾರಗೈದಿರುವ ಘಟನೆ ತುಮಕೂರಿನ ಬಂಡೆಪಾಳ್ಯದ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ ಹಾಗೂ ಪ್ರತಾಪ್ ಬಂಧಿತ ಆರೋಪಿಗಳು.

ಮಾ.4ರಂದು ಸಿದ್ದಗಂಗಾ ಮಠದ ಜಾತ್ರೆಗೆ ತೆರಳಿದ್ದ ಬಾಲಕಿ ಬೆಟ್ಟದ ಅರ್ಧದಾರಿಯಲ್ಲಿ ಮರದ ಕೆಳಗೆ ಕುಳಿತು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದಳು. ಈ ವೇಳೆ ಆರೋಪಿಗಳಾದ ಪ್ರತಾಪ್ ಹಾಗೂ ಇನ್ನೋರ್ವ ಅದನ್ನು ವೀಡಿಯೊ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಬಳಿಕ ಬಾಲಕಿಯನ್ನು ಬೈಕಿನಲ್ಲಿ ಬಲವಂತವಾಗಿ ಬಂಡೆಪಾಳ್ಯದ ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರಗೈದಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಅಸ್ವಸ್ಥಳಾದ ಬಾಲಕಿಯನ್ನು ಬಳಿಕ ಸಿದ್ದಗಂಗಾ ಮಠದ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಸಂತ್ರಸ್ತೆಯನ್ನು ಆಕೆಯ ಸ್ನೇಹಿತ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here