Home Uncategorized ದಂಪತಿಯಿಂದ ಹಣ ವಸೂಲಿ: ರಾಜ್ಯ ಸರ್ಕಾರವನ್ನ ರೋಲ್ಕಾಲ್ ಸರ್ಕಾರ ಎಂದು ಜರಿದ ಕಾಂಗ್ರೆಸ್

ದಂಪತಿಯಿಂದ ಹಣ ವಸೂಲಿ: ರಾಜ್ಯ ಸರ್ಕಾರವನ್ನ ರೋಲ್ಕಾಲ್ ಸರ್ಕಾರ ಎಂದು ಜರಿದ ಕಾಂಗ್ರೆಸ್

19
0

ಬೆಂಗಳೂರು: ನಗರದಲ್ಲಿ ರಾತ್ರಿ ಹೊತ್ತು ಜನರು ಊಟಕ್ಕೆ, ಬರ್ತ್​ ಡೇ ಪಾರ್ಟಿಗೆ ಅಥವಾ ವಾಕ್​ ಎಂದು ಓಡಾಡುತ್ತಿರುತ್ತಾರೆ. ಹೀಗೆ ತಮ್ಮ ಮನೆಗೆ ದಂಪತಿ (couple) ಓರ್ವರು ಬರುತ್ತಿದ್ದರು. ಈ ವೇಳೆ ದಂಪತಿಗೆ ಪೊಲೀಸರು ಕಿರುಕುಳ ನೀಡಿ, ಬಳಿಕ ಇಲ್ಲಸಲ್ಲದ ರೂಲ್ಸ್​ ಹೇಳಿ ಒಂದು ಸಾವಿರ ರೂ. ಹಣ ಪೀಕಿರುವಂತಹ ಘಟನೆ ನಿನ್ನೆ(ಡಿ.11) ನಡೆದಿದೆ. ಸದ್ಯ ಇದೇ ವಿಚಾರವನ್ನು ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ರೋಲ್ಕಾಲ್ (roll-call) ಸರ್ಕಾರ ಎಂದು ಜರಿದು ಕಾಂಗ್ರೆಸ್ ಟ್ವೀಟ್​ ಮಾಡಿದೆ. ಬೆಂಗಳೂರಲ್ಲಿ ರಾತ್ರಿ ಗಸ್ತು ತಿರುಗುತ್ತಾ ಜನತೆಗೆ ರಕ್ಷಣೆ ನೀಡಬೇಕಾದ ಪೋಲಿಸರು ತಮ್ಮ ಪಾಡಿಗೆ ತಾವು ಮನೆಗೆ ಹೋಗುತ್ತಿದ್ದ ಅಮಾಯಕ ದಂಪತಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಥೇಟ್ ದರೋಡೆಕೋರರಂತೆ ವರ್ತಿಸಿ ಹಣ ವಸೂಲಿ ಮಾಡಿರುವುದು ವರದಿಯಾಗಿದೆ.

ಬಿಜೆಪಿ ಸರ್ಕಾರ ಮೋದಿ ಭಜನೆ ಮಾಡುತ್ತಾ ಕಾಲಕಳೆಯುತ್ತಿದೆ

ಬಹುಶಃ ರಾಜ್ಯ ರೋಲ್ಕಾಲ್ ಸರ್ಕಾರದ ಪೊಲೀಸ್ ವ್ಯವಸ್ಥೆಯ ಇಂದಿನ ಪರಿಸ್ಥಿತಿ ಅರಿಯಲು ಈ ಒಂದು ಘಟನೆ ಸಾಕಾಗಿದೆ. ತನಗೂ ಇಲಾಖೆಗೂ ಸಂಬಂಧ ಇಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಗೃಹ ಸಚಿವರ ಅಡಿಯಲ್ಲಿ ಲಕ್ಷ-ಕೋಟಿಗಳ ಲೆಕ್ಕದಲ್ಲಿ ಲಂಚ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದಿರುವ ಅಧಿಕಾರಿಗಳು ಅಕ್ಷರಶಃ ದರೋಡೆಕೋರಂತೆ ಜನರ ಲೂಟಿಗೆ ಇಳಿದಿದ್ದಾರೆ. 40% ಸರ್ಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲಕಳೆಯುತ್ತಿದೆ ಎಂದು ಟ್ವೀಟ್ ಮೂಲಕ ಹರಿಹಾಯ್ದಿದೆ.

@BJP4Karnataka ಸರ್ಕಾರದಲ್ಲಿ
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ – ರಾಜಮರ್ಯಾದೆ

ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ – ರಾಜಮರ್ಯಾದೆ

ರೌಡಿಗಳಿಗೆ, ಕ್ರಿಮಿನಲ್‌ಗಳಿಗೆ – ರಾಜಮರ್ಯಾದೆ

ಆದರೆ
ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ – ಲಾಠಿಏಟು

ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‌ಗಳಂತೆ ಕಾಣುವರೇ?

— Karnataka Congress (@INCKarnataka) December 12, 2022

ಇದನ್ನೂ ಓದಿ: ಬಾಡಿಗೆ ಕಟ್ಟುವಂತೆ ನೋಟಿಸ್: ಡಿಪೋ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ

ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ ರಾಜಮರ್ಯಾದೆ

ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ, ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ, ರೌಡಿಗಳಿಗೆ, ಕ್ರಿಮಿನಲ್​ಗಳಿಗೆ ಬಿಜೆಪಿ ಸರ್ಕಾರದಲ್ಲಿ ರಾಜಮರ್ಯಾದೆ ನೀಡುತ್ತಾರೆ. ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ, ದಲಿತ ಹೋರಾಟಗಾರರಿಗೆ ಮಾತ್ರ ಬಿಜೆಪಿ ಸರ್ಕಾರದಲ್ಲಿ ಲಾಠಿ ಏಟು ನೀಡಲಾಗುತ್ತದೆ. ಬಿಜೆಪಿ ದೃಷ್ಟಿಯಲ್ಲಿ ದಲಿತರು ಮಾತ್ರ ಕ್ರಿಮಿನಲ್​ಗಳಂತೆ ಕಾಡುವರೇ? ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಾಂಗ್ರೆಸ್​ ವಾಗ್ದಾಳಿ ಮಾಡಿದೆ. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನಿನ್ನೆ ಪ್ರತಿಭಟನೆ ಮಾಡಿದ್ದು, ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್​ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here