ಚೆನ್ನೈ : ಕಾಂಗ್ರೆಸ್ ಅಭ್ಯರ್ಥಿ,ಮಾಜಿ ಐಎಎಸ್ ಅಧಿಕಾರಿ ಹಾಗೂ ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಲ್ಲಿ ತನ್ನ ನಿಕಟ ಪ್ರತಿಸ್ಪರ್ಧಿ ಬಿಜೆಪಿಯ ಬಾಲಗಣಪತಿ ವಿ.ಪೊನ್ ಅವರೆದುರು 5,72,155 ಮತಗಳ ಅಂತರದೊಂದಿಗೆ ವಿಜಯದ ನಗೆ ಬೀರಿದ್ದಾರೆ.
ಸೆಂಥಿಲ್ ಅವರು 7,96,956 ಮತಗಳನ್ನು ಗಳಿಸಿದ್ದರೆ ಪೊನ್ ಅವರಿಗೆ 2,24,801 ಮತಗಳು ಬಿದ್ದಿವೆ.