Home Uncategorized ದಾಖಲೆ ಪರಿಶೀಲಿಸದೆ ವೀಸಾ ವಿಸ್ತರಣೆ: ಹೈಕೋರ್ಟ್ ಅಸಮಾಧಾನ

ದಾಖಲೆ ಪರಿಶೀಲಿಸದೆ ವೀಸಾ ವಿಸ್ತರಣೆ: ಹೈಕೋರ್ಟ್ ಅಸಮಾಧಾನ

28
0

ಬೆಂಗಳೂರು: ವೈದ್ಯಕೀಯ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸದೆ ಯೆಮೆನ್ ದೇಶದ ಪ್ರಜೆಯೊಬ್ಬರ ವಿಸಿಟೇಷನ್(ಭೇಟಿ) ವೀಸಾವನ್ನು ವೈದ್ಯಕೀಯ ವೀಸಾವಾಗಿ ಪರಿವರ್ತಿಸಿ ಹಲವು ವರ್ಷಗಳ ಕಾಲ ಅದರ ಅವಧಿಯನ್ನೂ ವಿಸ್ತರಿಸಿದ್ದ ಬೆಂಗಳೂರಿನ ಪ್ರಾದೇಶಿಕ ವಿದೇಶಿಯರ ನೋಂದಣಿ ಅಧಿಕಾರಿಯ(ಎಫ್‍.ಆರ್.ಆರ್.ಒ) ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ವೈದ್ಯಕೀಯ ವೀಸಾ ಅಥವಾ ಅದರ ವಿಸ್ತರಣೆಗೆ ಕೋರಿದ ವೇಳೆ ಅಗತ್ಯ ವೈದ್ಯಕೀಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಆದೇಶಿಸಿದೆ.

ವೈದ್ಯಕೀಯ ವೀಸಾ ಅವಧಿ ವಿಸ್ತರಣೆ ಮಾಡದ ಎಫ್‍.ಆರ್.ಆರ್.ಒ ಕ್ರಮ ಪ್ರಶ್ನಿಸಿ ಯಮನ್ ದೇಶದ ಪ್ರಜೆ ಮೊಹಮ್ಮದ್ ನೋಮಾನ್ ಅಹ್ಮದ್ ಅಲ್ಮೇರಿ ಎಂಬಾತ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ.

ಅಲ್ಲದೆ, ವೈದ್ಯಕೀಯ ವೀಸಾ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿದ ಕೂಡಲೇ ಅದನ್ನು ಪುರಸ್ಕರಿಸುವ ಧೋರಣೆ ಕೈಬಿಡಬೇಕು. ಯಾವ ಆಧಾರದಲ್ಲಿ ಮೆಡಿಕಲ್ ವೀಸಾ ವಿಸ್ತರಣೆಗೆ ಆಸ್ಪತ್ರೆಗಳು ಶಿಫಾರಸು ಮಾಡುತ್ತಿವೆ ಎಂಬುದನ್ನು ಪರಿಶೀಲಿಸಬೇಕು. ವೀಸಾಗಳ ವಿಸ್ತರಣೆ/ಪರಿವರ್ತನೆಗೆ ಆಸ್ಪತ್ರೆಗಳು ವಿದೇಶಿಯರೊಂದಿಗೆ ಕೈಜೋಡಿಸಲು ಅವಕಾಶ ನೀಡಬಾರದು ಎಂದು ನಿರ್ದೇಶಿಸಿದೆ.

LEAVE A REPLY

Please enter your comment!
Please enter your name here