ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತವನ್ನು ಪಡೆದಿದ್ದು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರ ಇದೀಗ ಚರ್ಚೆಯಲ್ಲಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ದೆಹಲಿಗೆ ಹೋಗಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿರುವುದಾಗಿ ಸೋಮವಾರ ಹೇಳಿದ್ದಾರೆ. ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಳ ಬಹುಮತವನ್ನು ಪಡೆದಿದ್ದು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರ ಇದೀಗ ಚರ್ಚೆಯಲ್ಲಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ದೆಹಲಿಗೆ ಹೋಗಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿರುವುದಾಗಿ ಸೋಮವಾರ ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಶಿವಕುಮಾರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅವರು ಪಕ್ಷದ ಕೇಂದ್ರ ನಾಯಕತ್ವ ಮತ್ತು ವೀಕ್ಷಕರ ತಂಡದೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
Congress leader Siddaramaiah to today come to New Delhi amid discussions in the party to decide the next Karnataka CM.#Karnataka
(File Photo) pic.twitter.com/SZZ3g7P3l6
— ANI (@ANI) May 15, 2023
ಮೂಲಗಳ ಪ್ರಕಾರ, ರಾಜ್ಯದ ಉನ್ನತ ಹುದ್ದೆಯನ್ನು ಯಾರು ಅಲಂಕರಿಸಬೇಕು ಎನ್ನುವ ವಿಚಾರವಾಗಿ ಉಭಯ ನಾಯಕರು ದೆಹಲಿ ಭೇಟಿಯ ಸಾಧ್ಯತೆಯಿದೆ.
ಇದನ್ನೂ ಓದಿ: ಕೆಪಿಸಿಸಿ ಸಾರಥಿ ಡಿ ಕೆ ಶಿವಕುಮಾರ್ ಗೆ ಹುಟ್ಟುಹಬ್ಬ ಸಂಭ್ರಮ: ‘ಕನಕಪುರ ಬಂಡೆ’ಗೆ ಹೈಕಮಾಂಡ್ ಕೊಡುತ್ತಾ ಸಿಹಿಸುದ್ದಿ?
ಇಂದು ದೆಹಲಿಗೆ ಭೇಟಿ ನೀಡುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಹೋಗಬೇಕೋ ಬೇಡವೋ ಎಂದು ಇನ್ನೂ ನಿರ್ಧರಿಸಿಲ್ಲ’ ಎಂದು ಹೇಳಿದರು.
ನನಗೆ ಕೊಟ್ಟ ಕೆಲಸವನ್ನು ಪೂರ್ಣಗೊಳಿಸಿದ್ದೇನೆ. ಶುಭ ಮುಹೂರ್ತದಲ್ಲಿ ಸರ್ಕಾರ ರಚನೆಯಾಗಲಿದೆ. ನನಗೆ ಹೈಕಮಾಂಡ್‌ನಿಂದ ಇನ್ನೂ ಯಾವುದೇ ಕರೆ ಬಂದಿಲ್ಲ, ನೋಡೋಣ. ನಾವು ಶುಭ ದಿನ, ಶುಭ ಮುಹೂರ್ತದಲ್ಲಿ ಸರ್ಕಾರ ರಚಿಸುತ್ತೇವೆ ಎಂದರು.
“We have passed a one-line resolution. We will leave it to the party high command. I have not decided to go to Delhi. I have done whatever job I have to do”: KPCC chief DK Shivakumar on the decision on Karnataka CM#Karnataka pic.twitter.com/hGDDNvgQUg
— ANI (@ANI) May 15, 2023
‘ನಾನು ಇನ್ನೂ ದೆಹಲಿಗೆ ಹೋಗಲು ನಿರ್ಧರಿಸಿಲ್ಲ. ಏಕೆಂದರೆ, ರಾಜ್ಯದೆಲ್ಲೆಡೆಯಿಂದ ಸಾಕಷ್ಟು ಜನ ಬರುತ್ತಿದ್ದಾರೆ ಮತ್ತು ಇಂದು ನನ್ನ ಜನ್ಮದಿನವಾದ ಕಾರಣ ನನ್ನ ಮನೆಯಲ್ಲಿ ಸಣ್ಣಪುಟ್ಟ ಆಚರಣೆಗಳಿವೆ. ಸ್ವಲ್ಪ ಪೂಜೆ ಇದೆ, ನಾನು ಕೆಲವು ದೇವಸ್ಥಾನಗಳಿಗೆ ಹೋಗಬೇಕು’ ಎಂದು ಹೇಳಿದರು.
ಆದರೆ, ನಾವು ಒಂದು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಅದನ್ನು ಪಕ್ಷದ ಹೈಕಮಾಂಡ್‌ಗೆ ಬಿಡುತ್ತೇವೆ ಎಂದರು
ಇದಕ್ಕೂ ಮುನ್ನ ಶಿವಕುಮಾರ್ ಅವರು, ಹುಟ್ಟುಹಬ್ಬದ ಶುಭಾಶಯ ಕೋರಲು ಬೆಂಗಳೂರಿನ ತಮ್ಮ ನಿವಾಸದ ಹೊರಗೆ ಜಮಾಯಿಸಿದ ಬೆಂಬಲಿಗರನ್ನು ಭೇಟಿ ಮಾಡಿದರು.
ಕಾಂಗ್ರೆಸ್ ನಾಯಕನಿಗೆ ಶುಭಾಶಯ ಕೋರಲು ನೂರಾರು ಕಾಂಗ್ರೆಸ್ ಬೆಂಬಲಿಗರು ಕೇಕ್‌ಗಳೊಂದಿಗೆ ಗಂಟೆಗಟ್ಟಲೆ ಕಾದು ನಿಂತಿದ್ದರು. ಶಿವಕುಮಾರ್ ಅವರಿಗೆ ಮಾಲಾರ್ಪಣೆ ಮಾಡಿ ಪುಷ್ಪಗುಚ್ಛಗಳನ್ನು ನೀಡಲಾಯಿತು.