ಬಾಗಲಕೋಟೆ: ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ತನ್ನ ಲೀವ್ ಇನ್ ಪ್ರಿಯತೆ ಶ್ರದ್ಧಾ ವಾಕರ್ಳನ್ನು ಕೊಂದು (Shraddha Walkar Murder) ದೇಹವನ್ನು ತುಂಡು ತಂಡು ಮಾಡಿದ ನಂತರ ದೇಶದಲ್ಲಿ ಇಂತಹದ್ದೇ ಪ್ರಕರಣಗಳು ನಡೆಯಲು ಆರಂಭಿವಿಸೆ. ಶ್ರದ್ಧಾ ಕೊಲೆ ನಂತರ ದೆಹಲಿಯಲ್ಲಿ ಅಂತಹದ್ದೇ ಒಂದು ಘಟನೆ ನಡೆದಿತ್ತು. ಪಾಂಡವನಗರದ ಮಹಿಳೆ ಮತ್ತು ಆಕೆಯ ಮಗ ಸೇರಿಕೊಂಡು ಪತಿಯನ್ನು ಕೊಂದು ಫ್ರಿಡ್ಜ್ನಲ್ಲಿ ಇಟ್ಟಿದ್ದರು. ಇಂತಹದ್ದೇ ಒಂದು ಘಟನೆ ಕರ್ನಾಟಕದಲ್ಲೂ ನಡೆದಿದೆ. ಬಾಗಲಕೋಟೆ (Bagalakote) ಜಿಲ್ಲೆಯ ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಪಾಪಿ ಮಗನೊಬ್ಬ ತನ್ನ ಜನನಕ್ಕೆ ಕಾರಣವಾಗಿದ್ದ ತಂದೆಯನ್ನೇ ಕೊಂದು (Son kills father) ದೇಹವನ್ನು ತುಂಡು ತುಂಡು ಮಾಡಿದ್ದಾನೆ.
ಪರಶುರಾಮ ಕುಳಲಿ (54) ಎಂಬವರು ನಿತ್ಯ ಕುಡಿದು ಬಂದು ಮನೆಯಲ್ಲಿ ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ (20) ತಂದೆಯನ್ನೇ ರೋಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದಾನೆ. ಈ ಘಟನೆ ಕಳೆದ ಮಂಗಳವಾರ ರಾತ್ರಿ 12ಗಂಟೆ ಸುಮಾರಿಗೆ ನಡೆದಿದೆ.
ಇದನ್ನೂ ಓದಿ: ಅಮೆರಿಕ: ಇದಾಹೋ ಮಾಸ್ಕೋ ನಗರದ ಯೂನಿವರ್ಸಿಟಿ ಕ್ಯಾಂಪಸ್ ಹೊರಗೆ ನಾಲ್ವರನ್ನು ಕೊಂದ ಹಂತಕ ಪುನಃ ದಾಳಿ ನಡೆಸುವ ಭೀತಿ?
ತಂದೆಯನ್ನು ಕೊಂದ ನಂತರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ಯುತ್ತಾನೆ. ತಂದೆಯ ಮೃತದೇಹವನ್ನು ಕೊಳವೆ ಬಾವಿಗೆ ಹಾಕುವಾಗ ದೇಹ ಅದರೊಳಗೆ ಹೋಗದಿದ್ದಾಗ ಮಗ ವಿಠಲ, ದೇಹವನ್ನು 30 ತುಂಡುಗಳನ್ನಾಗಿ ಮಾಡಿ ಬೋರ್ವೆಲ್ಗೆ ಹಾಕಿ ಮನೆಗೆ ವಾಪಸ್ ಆಗಿದ್ದು, ಸದ್ಯ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ.
ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ತಂದೆಯನ್ನೇ ಮಧ್ಯರಾತ್ರಿಯಲ್ಲಿ ಕೊಂದು ಸೈಲೆಂಟಾಗಿ ಬೋರ್ವೆಲ್ಗೆ ಹಾಕಿದ್ದ ಆರೋಪಿ ವಿಠಲ, ಘಟನೆಯ ಮೂರು ದಿನಗಳ ನಂತರ ವಿಚಾರವನ್ನು ಮನೆಯಲ್ಲಿ ಬಾಯಿಬಿಟ್ಟಿದ್ದಾನೆ. ಇದರಿಂದ ಬೆಚ್ಚಿಬಿದ್ದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮುಧೋಳ ಠಾಣೆ ಪೊಲೀಸರು, ಸ್ಥಳಕ್ಕೆ ಜೆಸಿಬಿಯೊಂದಿಗೆ ಬಂದು ಕೊಳವೆಬಾವಿ ಅಗೆದು ಶವ ಹೊರ ತೆಗೆದಿದ್ದಾರೆ. ಸದ್ಯ ಆರೋಪಿ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ