ದೇವನಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಕಡೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ 14 ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಬೆಂಗಳೂರು: ದೇವನಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಕಡೆ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ 14 ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ.
ಇಂದು ದೇವನಹಳ್ಳಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಮಳೆ ಹಿನ್ನೆಲೆಯಲ್ಲಿ 14 ವಿಮಾನಗಳ ಲ್ಯಾಂಡಿಂಗ್ನಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿಗೆ ಆಗಮಿಸುತ್ತಿದ್ದ 12 ವಿಮಾನಗಳನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ಹೈದರಾಬಾದ್ ಹಾಗೂ ಕೊಯಮತ್ತೂರಿಗೆ ತಲಾ ಒಂದೊಂದು ವಿಮಾನ ಕಳುಹಿಸಲಾಗಿದೆ.
ಇದನ್ನು ಓದಿ: ಉತ್ತರಾಖಂಡ: ಎರಡು ದಿನಗಳಿಂದ ನಿರಂತರ ಮಳೆ, ಜೋಶಿಮಠದ ಜನತೆಗೆ ಮತ್ತೆ ಅನಾಹುತದ ಭೀತಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ತೆರಳಬೇಕಿದ್ದ ವಿಮಾನಗಳಲ್ಲೂ ವ್ಯತ್ಯಯ ಉಂಟಾಗಿದ್ದು, ಮಳೆಯಿಂದಾಗಿ ವಿಮಾನದಲ್ಲೇ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ದೇವನಹಳ್ಳಿ ಹಾಗೂ ಯಲಹಂಕ ಸೇರಿದಂತೆ ಬೆಂಗಳೂರಿನ ಹಲವೆಡೆ ಇಂದು ಸಂಜೆ ಧಾರಾಕಾರ ಮಳೆ ಆಗಿದ್ದು, ಸುಮಾರು ಒಂದು ಗಂಟೆ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
Due to heavy rains with thunder & lightning around @BLRAirport area, 14 incoming flgts hve been diverted. 12 were sent to Chennai, 1 each to Hyd & CBE. 7 were @IndiGo6E, 3 of @airvistara & 1 each @airindiain & @AkasaAir @XpressBengaluru@NewIndianXpress@xpresstn @KannadaPrabha
— S. Lalitha (@Lolita_TNIE) April 4, 2023