Home Uncategorized ದೇವರು ಕೊಟ್ರೂ ಪೂಜಾರಿ ಕೊಡ್ತಿಲ್ಲ: ಧಾರಾಕಾರ ಮಳೆಯಾಗುತ್ತಿದ್ದರೂ ರೈತರ ಬೆಳೆಗಳಿಗೆ  ಬಿಡ್ತಿಲ್ಲ ನೀರು!

ದೇವರು ಕೊಟ್ರೂ ಪೂಜಾರಿ ಕೊಡ್ತಿಲ್ಲ: ಧಾರಾಕಾರ ಮಳೆಯಾಗುತ್ತಿದ್ದರೂ ರೈತರ ಬೆಳೆಗಳಿಗೆ  ಬಿಡ್ತಿಲ್ಲ ನೀರು!

10
0

ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಸಾಕಷ್ಟು ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದೆ. ಈ ವರ್ಷ ಮುಂಗಾರು ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಸಮುದಾಯ ತಾವು ಬೆಳೆದಿರುವ ಬೆಳೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಸಾಕಷ್ಟು ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದೆ. ಈ ವರ್ಷ ಮುಂಗಾರು ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಸಮುದಾಯ ತಾವು ಬೆಳೆದಿರುವ ಬೆಳೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಆದರೆ ಸರ್ಕಾರಕ್ಕೆ, ಕುಡಿಯುವ ನೀರು ಮತ್ತು ವರ್ಷವಿಡೀ ಸಾಕಾಗುವಷ್ಟು ಸಂಗ್ರಹಣೆ ಮಾಡುವುದು ಮೊದಲ ಆದ್ಯತೆಯಾಗಿದೆ. ನೀರಿನ ಅವಶ್ಯಕತೆ ಇರುವ ಬಾಗಲಕೋಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಈಗಷ್ಟೇ ನಮ್ಮ ರೈತ ಮುಖಂಡರನ್ನು ಭೇಟಿ ಮಾಡುತ್ತಿದ್ದೇನೆ.  ನೀರಿನ ಅವಶ್ಯಕತೆಯು ನಿರ್ದಿಷ್ಟವಾಗಿದೆ ಮತ್ತು ಇದು ಸಮಯದ ಚೌಕಟ್ಟನ್ನು ಹೊಂದಿದೆ. ಬೆಳೆದಿರುವ ಖಾರಿಫ್ ಬೆಳೆಗಳಿಗೆ ನೀರು ಹರಿಸಿ ಕೇಳುತ್ತಿದ್ದೇವೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್  ಹೇಳಿದ್ದಾರೆ.

ಮಾಜಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೂಡ ಮಾತನಾಡಿ, ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ರೈತರಿಗೆ ಅದರಲ್ಲೂ ಭತ್ತದ ಬೆಳೆಗಾರರಿಗೆ ಕೂಡಲೇ ನೀರು ಕೊಡಬೇಕು. ಘಟಪ್ರಭಾ ನದಿಯ ಹಿಡಕಲ್ ಅಣೆಕಟ್ಟಿಗೆ ಒಳಹರಿವು ಉತ್ತಮವಾಗಿದ್ದು, ಬಲ ಮತ್ತು ಎಡದಂಡೆ ಕಾಲುವೆಗಳ ರೈತರು ನೀರಿಗಾಗಿ ಮನವಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಬಿನಿ ಜಲಾಶಯ ಬಹುತೇಕ ಭರ್ತಿ: ಕೆಆರ್‌ಎಸ್‌ ಒಳಹರಿವಿನಲ್ಲಿ ಹೆಚ್ಚಳ

ಅಣೆಕಟ್ಟುಗಳು ಶೇ 60ರಷ್ಟು ತುಂಬದ ಹೊರತು ನೀರು ಬಿಡಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ತುಂಗಭದ್ರಾ, ಭದ್ರಾ, ಘಟಪ್ರಭಾ, ಕೆಆರ್‌ಎಸ್, ಹೇಮಾವತಿ, ಮಲಪ್ರಭಾ, ವಾರಾಹಿ, ನಾರಾಯಣಪುರ, ಕಬಿನಿ ಮತ್ತು ಹಾರಂಗಿ ಸೇರಿದಂತೆ 13 ಪ್ರಮುಖ ಜಲಾಶಯಗಳಿದ್ದು, ಇವುಗಳಲ್ಲಿ ಶೇ . 60ರಷ್ಟು ಸಾಮರ್ಥ್ಯದ ನೀರು ತುಂಬಿಲ್ಲ ಎಂದು ಮೂಲಗಳು ತಿಳಿಸಿವೆ. ಈಗ  ಕೃಷಿಗೆ  ನೀರು ಬಿಡುವುದು ಜಾಣತನವಲ್ಲ ಎಂದು ವಿವರಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಜಿಲ್ಲೆಯ ಸಚಿವರು ಹಾಗೂ ಇತರರ ಸಭೆ ನಡೆಸುತ್ತೇವೆ. ಅಗತ್ಯವಿರುವ ಕಡೆ ನೀರು ಬಿಡುತ್ತೇವೆ ಎಂದಿದ್ದಾರೆ. ‘ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಕಾವೇರಿ ಜಲಾನಯನ ನಗರಗಳಿಗೆ 25 ಟಿಎಂಸಿ ಅಡಿ ನೀರು  ಅಗತ್ಯವಿದೆ. ತಮಿಳುನಾಡಿಗೆ 40 ಟಿಎಂಸಿ ಅಡಿ ನೀರು ಬಿಡಬೇಕು. ಬಹುತೇಕ ಜಲಾಶಯಗಳು ಶೇ.40ರಷ್ಟು ಮಾತ್ರ ತುಂಬಿರುವಾಗ ಎಲ್ಲರಿಗೂ ನೀರು ಎಲ್ಲಿ ಬಿಡಲು ಸಾಧ್ಯ?

ಇದನ್ನೂ ಓದಿ: ರಾಜ್ಯದಲ್ಲಿ ಮಳೆಯ ಆರ್ಭಟ: ಉಡುಪಿ, ದಕ್ಷಿಣ ಕನ್ನಡ ಸೇರಿ ಆರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಈ ವರ್ಷವೂ ಮುಂಗಾರು ಉತ್ತಮವಾಗಿ ಮುಂದುವರಿಯುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ನಾವು ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿದಾಗ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುತ್ತೇವೆ. ಇದುವರೆಗೆ ಯಾವ ವರ್ಷದಲ್ಲಿ ಕೃಷಿಗೆ ನೀರು ಬಿಡುವುದನ್ನು ನಿಲ್ಲಿಸಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here