Home Uncategorized ದೇಶದಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಪ್ರಮಾಣದಲ್ಲಿನ ಹೆಚ್ಚಳವು ಕಳವಕಾರಿ ವಿಚಾರವಾಗಿದೆ: ರಾಜ್ಯಪಾಲ ಗೆಹ್ಲೋಟ್

ದೇಶದಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಪ್ರಮಾಣದಲ್ಲಿನ ಹೆಚ್ಚಳವು ಕಳವಕಾರಿ ವಿಚಾರವಾಗಿದೆ: ರಾಜ್ಯಪಾಲ ಗೆಹ್ಲೋಟ್

26
0

ದೇಶದಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಪ್ರಮಾಣದಲ್ಲಿನ ಹೆಚ್ಚಳಕ್ಕೆ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್‌ ಅವರು ವಿಷಾದ ವ್ಯಕ್ತಪಡಿಸಿದ್ದು, ಇದು ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದು ಬುಧವಾರ ಹೇಳಿದ್ದಾರೆ. ಬೆಂಗಳೂರು: ದೇಶದಲ್ಲಿ ವಿದ್ಯಾರ್ಥಿಗಳ ಡ್ರಾಪ್ ಔಟ್ ಪ್ರಮಾಣದಲ್ಲಿನ ಹೆಚ್ಚಳಕ್ಕೆ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್‌ ಅವರು ವಿಷಾದ ವ್ಯಕ್ತಪಡಿಸಿದ್ದು, ಇದು ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದೆ ಎಂದು ಬುಧವಾರ ಹೇಳಿದ್ದಾರೆ.

ನಗರದ ಗುಡ್ ಷೆಫರ್ಡ್ ಶಾಲೆಯಲ್ಲಿ ಭಾರತದ ಆಂಗ್ಲೋ ಇಂಡಿಯನ್ ಶಾಲೆಗಳ ಮುಖ್ಯಸ್ಥರ ಸಂಘ(ಎಹೆಚ್‍ಎಐಎಸ್ವು ಆಯೋಜಿಸಿದ್ದ ಶತಮಾನೋತ್ಸವ ಸಮ್ಮೇಳನವನ್ನು ಉದ್ಘಾಟಿಸಿ ರಾಜ್ಯಪಾಲರು ಮಾತನಾಡಿದರು.

“ಶಿಕ್ಷಣವು ಅಭಿವೃದ್ಧಿಯ ಹಾದಿಯನ್ನು ಸುಗಮಗೊಳಿಸುತ್ತದೆ. ಸಮಾಜಕ್ಕೆ, ದೇಶಕ್ಕೆ ಮತ್ತು ಜಗತ್ತಿಗೆ ಸರಿಯಾದ ದಿಕ್ಕನ್ನು ನೀಡುವ ಏಕೈಕ ಸಾಧನವಾಗಿದೆ. ದೇಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಡ್ರಾಪ್ ಔಟ್ ಪ್ರಮಾಣದಲ್ಲಿನ ಹೆಚ್ಚಳವು ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ಹೋಗಲಾಡಿಸಲು ನಾವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಹೆಚ್ಚಿನ ಸಂಘಟನೆಗಳನ್ನು ಸೇರಿಸುವುದು ಇದರ ವಿರುದ್ಧ ಹೋರಾಡುವ ಮಾರ್ಗವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸಲು, ಸಂಸ್ಥೆಗಳು ಮುಂದೆ ಬಂದು ವಿದ್ಯಾರ್ಥಿಗಳು, ಶಾಲೆಗಳು ಮತ್ತು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು. ಆಧುನಿಕ ಜ್ಞಾನವನ್ನು ಮಾನವ ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಎಲ್ಲರಿಗೂ ಮೌಲ್ಯಯುತ ಶಿಕ್ಷಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಸಿದ್ಧಪಡಿಸಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತ ಮತ್ತು ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡಲಿದೆ ಎಂದರು.

ಈ ಶಿಕ್ಷಣ ನೀತಿಯ ಉದ್ದೇಶವು ಎಲ್ಲರಿಗೂ ಉನ್ನತ ಶಿಕ್ಷಣವನ್ನು ಒದಗಿಸುವುದು, ಮಾತೃಭಾಷೆಯಲ್ಲಿ ಅಧ್ಯಯನದ ಜೊತೆಗೆ ನೆಚ್ಚಿನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣದಿಂದ ಶಿಕ್ಷಣದ ಹರಡುವಿಕೆ ವೇಗವಾಗಿ ಹೆಚ್ಚಾಗುತ್ತದೆ ಎಂದ ಅವರು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವು ಬಹಳ ಮುಖ್ಯವಾಗಿದೆ. ತರಗತಿಗಳಲ್ಲಿ ಡಿಜಿಟಲ್ ಕಲಿಕಾ ಪರಿಕರಗಳ ಪರಿಣಾಮಕಾರಿ ಬಳಕೆಗೆ ಹೆಚ್ಚಿನ ಅವಶ್ಯಕತೆಯಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here