Home Uncategorized ದೇಶಾದ್ಯಂತ 63 ಜೆಎನ್.1 ಪ್ರಕರಣ ಪತ್ತೆ

ದೇಶಾದ್ಯಂತ 63 ಜೆಎನ್.1 ಪ್ರಕರಣ ಪತ್ತೆ

19
0

ಹೊಸದಿಲ್ಲಿ: ಭಾರತದಲ್ಲಿ ರವಿವಾರ ಕೋವಿಡ್ 19ರ ಉಪ ಪ್ರಬೇಧ ಜೆಎನ್.1ನ 63 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಗೋವಾದಲ್ಲಿ, 34, ಮಹಾರಾಷ್ಟ್ರದಲ್ಲಿ 9, ಕರ್ನಾಟಕದಲ್ಲಿ 8, ಕೇರಳದಲ್ಲಿ 6, ತಮಿಳುನಾಡಿನಲ್ಲಿ 4, ತೆಲಂಗಾಣದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ ಎಂದು ಅದು ಹೇಳಿದೆ.

ಆದರೆ, ಇದುವರೆಗೆ ಯಾವುದೇ ಪ್ರಕರಣಗಳಲ್ಲೂ ಕ್ಲಸ್ಟರ್ ಮಾದರಿ ವರದಿಯಾಗಿಲ್ಲ. ಸೋಂಕಿತರೆಲ್ಲರಲ್ಲೂ ಸೌಮ್ಯ ಲಕ್ಷಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಯಾವುದೇ ಏರಿಕೆಯಾಗಿಲ್ಲ. ಇತರ ವೈದ್ಯಕೀಯ ಕಾರಣಗಳಿಗೆ ಆಸ್ಪತ್ರೆಗೆ ದಾಖಲಾದವರಲ್ಲಿ ಕೋವಿಡ್-19 ಪ್ರಾಸಂಗಿಕವಾಗಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here