ಮಂಗಳೂರು: ಆಂಧ್ರಪ್ರದೇಶದ ವಿಜಿಲಾಪುರಂನಲ್ಲಿ ಕಾಸರಗೋಡು ಮೂಲದ ಇಮಾಮ ಸಂಘದ ವತಿಯಿಂದ ನಿರ್ಮಿಸ ಲಾದ ಮಾಲಿಕ್ ದೀನಾರ್ ಜುಮಾ ಮಸೀದಿಯನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಲ್‌ಅಝ್ಹರಿ ಉದ್ಘಾಟಿಸಿದರು. ಹಿಂದುಳಿದ ಪ್ರದೇಶಗಳ ಜನತೆಯ ಧಾರ್ಮಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಕಾರ್ಯಾಚರಿಸುತ್ತಿರುವ ಹುದವಿಗಳ ಹಾದಿಯಾ ಘಟಕದೊಂದಿಗೆ ಇಮಾಮ ಸಂಘ ಕೈ ಜೋಡಿಸಿ ನಿರ್ಮಿಸಿದ ಮದ್ರಸ ಕಟ್ಟಡವನ್ನೂ ಖಾಝಿ ಲೋಕಾರ್ಪಣೆ ಗೊಳಿಸಿದರು.
ಬಳಿಕ ಮಾತನಾಡಿದ ಅವರು ಹಿಂದುಳಿದ ಪ್ರದೇಶದ ಶೈಕ್ಷಣಿಕ ಪ್ರಗತಿಯು ದೇಶದ ಶಿಕ್ಷಣ ಕ್ರಾಂತಿಗೆ ಬುನಾದಿಯಾ ಗಬೇಕಿದೆ. ಮೌಲ್ಯಯುತ ಶಿಕ್ಷಣವು ದೇಶದ ಪ್ರತಿಯೊಂದು ಪ್ರಜೆಯ ಹಕ್ಕಾಗಿದೆ ಎಂದರು.
ದೇಶಾದ್ಯಂತ ಹಾದಿಯಾ ಘಟಕ ಎರಡೂವರೆ ಸಾವಿರ ಶಾಲೆಗಳನ್ನು ನಡೆಸುತ್ತಿದೆ. ದೇಶದ ಪ್ರತಿಯೊಂದು ಹಳ್ಳಿಗಳಲ್ಲೂ ಮುಂದೊಂದು ದಿನ ಶೈಕ್ಷಣಿಕ ಕ್ರಾಂತಿ ಬೆಳಗಲಿ ಎಂದು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾರೈಸಿದರು.
ಈ ಸಂದರ್ಭ ಹುಸೈನ್ ರಹ್ಮಾನಿ, ಸೈಫುಲ್ಲಾಹ್, ರಈಸ್ ಹುದವಿ, ಅಬ್ದುಸ್ಸಮದ್ ಹುದವಿ, ಲುಕ್ಮಾನ್ ಹುದವಿ, ಮುಈನುದ್ದೀನ್ ಹುದವಿ ಉಪಸ್ಥಿತರಿದ್ದರು.