ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ಈಗ 91ರ ಇಳಿ ವಯಸ್ಸು. ಶಾರೀರಿಕವಾಗಿ ಇತ್ತೀಚೆಗೆ ಕೊಂಚ ಕುಗ್ಗಿದಂತೆ ಕಂಡುಬಂದರೂ ಮಾನಸಿಕವಾಗಿ ಸದೃಢರಾಗಿದ್ದಾರೆ. ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ಈಗ 91ರ ಇಳಿ ವಯಸ್ಸು. ಶಾರೀರಿಕವಾಗಿ ಇತ್ತೀಚೆಗೆ ಕೊಂಚ ಕುಗ್ಗಿದಂತೆ ಕಂಡುಬಂದರೂ ಮಾನಸಿಕವಾಗಿ ಸದೃಢರಾಗಿದ್ದಾರೆ.
ಇಂದು 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ(9th International Yoga Day) ಸಂದರ್ಭದಲ್ಲಿ ನಾಡಿನ ಜನತೆಗೆ ಅವರು ವಿಶೇಷ ಸಂದೇಶ ನೀಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ನಾನು 91ನೇ ವಯಸ್ಸಿನಲ್ಲಿದ್ದೇನೆ. ನಾನಿನ್ನೂ ಈ ಮಟ್ಟದಲ್ಲಿ ಉಳಿದುಕೊಳ್ಳಲು ನಿರಂತರ ಯೋಗ ಅಭ್ಯಾಸ ನನಗೆ ಸಹಾಯ ಮಾಡಿದೆ. ಎಲ್ಲರೂ ಯೋಗ ಮಾಡಿ, ಮಾನಸಿಕ ಮತ್ತು ದೈಹಿಕ ಫಿಟ್ನೆಸ್, ಕ್ಷೇಮ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.
Warm greetings to my fellow Indians on International #YogaDay. I have touched the age of 91 and yoga has helped sustain me. I urge everybody to practice yoga and discover its benefits. pic.twitter.com/Nep9SNr2uN
— H D Deve Gowda (@H_D_Devegowda) June 21, 2023