Home Uncategorized “ನಮ್ಮ ಸುತ್ತಲೂ ಕಪ್ಪು ಜನರಿದ್ದಾರೆ”: ದಕ್ಷಿಣ ಭಾರತೀಯರ ಬಗ್ಗೆ ಬಿಜೆಪಿ ನಾಯಕ ನೀಡಿರುವ ಹೇಳಿಕೆಯ ವಿಡಿಯೋ...

“ನಮ್ಮ ಸುತ್ತಲೂ ಕಪ್ಪು ಜನರಿದ್ದಾರೆ”: ದಕ್ಷಿಣ ಭಾರತೀಯರ ಬಗ್ಗೆ ಬಿಜೆಪಿ ನಾಯಕ ನೀಡಿರುವ ಹೇಳಿಕೆಯ ವಿಡಿಯೋ ವೈರಲ್

33
0

ಹೊಸದಿಲ್ಲಿ: ಡಿಎಂಕೆ ಸಂಸದ ದಯಾನಿಧಿ ಮಾರನ್ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ ಜನರ ಬಗ್ಗೆ ನೀಡಿದ್ದಾರೆನ್ನಲಾದ ‘ಅವಹೇಳನಕಾರಿ’ ಹೇಳಿಕೆ ವಿವಾದವಾಗಿರುವಂತೆಯೇ, ಬಿಜೆಪಿಯ ತರುಣ್ ವಿಜಯ್ ನೀಡಿದ್ದಾರೆನ್ನಲಾಗಿರುವ ಹಳೆಯ ವೀಡಿಯೊವೊಂದನ್ನು ಡಿಎಂಕೆ ಬಿಡುಗಡೆಗೊಳಿಸಿದೆ.

ಈ ವೀಡಿಯೊದಲ್ಲಿ ತರುಣ್ ವಿಜಯ್ ದಕ್ಷಿಣ ಭಾರತೀಯರ ಬಗ್ಗೆ ಜನಾಂಗೀಯ ತಾರತಮ್ಯಪೂರಿತ ಮಾತುಗಳನ್ನು ಆಡಿದ್ದಾರೆನ್ನಲಾಗಿದೆ.

‘‘ನಾವು ಜನಾಂಗೀಯವಾದಿಗಳಾಗಿದ್ದರೆ, ಇಡೀ ದಕ್ಷಿಣ ಭಾರತದೊಂದಿಗೆ ನಾವು ಯಾಕೆ ಇರುತ್ತಿದ್ದೆವು? ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಜನರ ಜೊತೆ ನಾವು ಯಾಕೆ ವಾಸಿಸುತ್ತೇವೆ? ನಮ್ಮ ಸುತ್ತಲೂ ಕರಿಯ ಜನರಿದ್ದಾರೆ’’ ಎಂದು ಡಿಎಂಕೆಯ ಮಾಹಿತಿ ತಂತ್ರಜ್ಞಾನ ಘಟಕ ಹಂಚಿಕೊಂಡಿರುವ ವೀಡಿಯೊದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ವಿಜಯ್ ಮಾತನಾಡುವುದು ಕೇಳುತ್ತದೆ.

2017ರಲ್ಲಿ ‘ಅಲ್ ಜಝೀರ’ ಟಿವಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಈ ಹೇಳಿಕೆ ನೀಡಿದ್ದರು. ಬಳಿಕ ಆ ಹೇಳಿಕೆಯು ಭಾರೀ ವಿವಾದವಾಗಿತ್ತು. ನಂತರ, ಬಿಜೆಪಿ ನಾಯಕ ತನ್ನ ಹೇಳಿಕೆಗೆ ಕ್ಷಮೆ ಕೋರಿದ್ದರು.

Uttarakhand BJP Leader Tarun Vijay, disrespecting entire South Indians with racial remarks! pic.twitter.com/CULJqvyDQE

— DMK IT WING (@DMKITwing) December 25, 2023

LEAVE A REPLY

Please enter your comment!
Please enter your name here