Home ಕರ್ನಾಟಕ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ : ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ : ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

55
0

ಕಲಬುರಗಿ : ನರೇಂದ್ರ ಮೋದಿ ಅವರು ಇವೆಂಟ್ ಮ್ಯಾನೇಜ್ಮೆಂಟ್‌ನಲ್ಲಿ ಪರಣಿತರು. ಚುನಾವಣೆ ಬಂದಾಗ ಏನೇನು ಮಾಡಬೇಕು ಎಂಬುದು ಅವರಿಗೆ ಚನ್ನಾಗಿ ಗೊತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಶುಕ್ರವಾರ ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಸರ್ವೆ ಪ್ರಕಾರ ಕಳೆದ ಹತ್ತು ವರ್ಷದಲ್ಲಿ ಶೇ.67ರಷ್ಟು ಯುವಕರಿಗೆ ಉದ್ಯೋಗ ಸಿಗುವುದು ಕಷ್ಟ ಎಂದು ಹೇಳುತ್ತಿದೆ. ಗೇಮಿಂಗ್‌ ಕಂಪನಿ ಜೊತೆಗೆ ಕರೆಸಿ ಮಾತನಾಡಿದಂತೆ ನಿರುದ್ಯೋಗಿ ಯುವಕರನ್ನು ಕರೆಸಿ ಮಾತನಾಡಿಸಬೇಕಲ್ಲವೇ, ಅವರ ಸಮಸ್ಯೆಗಳು ಕೇಳಿಸಿಕೊಳ್ಳಬೇಕಲ್ಲವೇ ಎಂದು ಒತ್ತಾಯಿಸಿದರು.

ಗೇಮಿಂಗ್ ಉದ್ಯಮಗಳಿಗೆ 2 ಲಕ್ಷ ಕೋಟಿ ರೂ. ಟ್ಯಾಕ್ಸ್ ಹಾಕಿದ್ದಾರೆ. ಹೀಗಾಗಿ ಗೇಮಿಂಗ್ ಕಂಪನಿಗಳ ಬಂಡವಾಳ ವಿದೇಶಕ್ಕೆ ಹೋಗುತ್ತಾ ಇದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here