Home ಕರ್ನಾಟಕ ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಅನುಮತಿ:ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ

ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಅನುಮತಿ:ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ

28
0

ಬೆಂಗಳೂರು:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇ ರಿ ಕೃಷ್ಣಾದಲ್ಲಿ ಇಂದು ಪದವಿ ಕಾಲೇಜುಗಳು ಪ್ರಾರಂಭಿಸುವ ಕುರಿತು ಸಭೆ ಜರುಗಿತು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸವಿ ವರ ಚರ್ಚೆ ನಡೆಸಿದ ಮುಖ್ಯ ಮಂತ್ರಿಗಳು,ಈ ಸಂಬಂಧ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಬಗಳ ಬಗ್ಗೆ ಮಾಹಿತಿ ಪಡೆದರು.ಕೋವಿಡ್ 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಕಡ್ಡಾಯವಲ್ಲ.ಕಲಿಕೆಯ ನ್ನು ಕಾಲೇಜಿಗೆ ಬಂದು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಿದರು.

ಡಿಜಿಟಲ್ ಲರ್ನಿಂಗ್–ಎಲ್ ಎಂ ಎಸ್ ಬಗ್ಗೆಯೂ ಇಲಾಖೆಯ ಆಯುಕ್ತರು ವಿವರಿಸಿದರು.ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗುವಂತೆ ಟ್ಯಾಬ್ಲೆಟ್‍ಗಳನ್ನು ಖರೀದಿಸಲು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ಅಭಿವೃದ್ದಿ ಇಲಾಖೆಗಳಿಂದ ನೆರವು ಪಡೆಯಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

LEAVE A REPLY

Please enter your comment!
Please enter your name here