ದೆಹಲಿ ಅಬಕಾರಿ ನೀತಿ ಕೇಸಿನಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ವಿನಾಯಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮಾಧ್ಯಮಗಳ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದರು.
ಕಳೆದ ಕೆಲವು ವರ್ಷಗಳಿಂದ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದ ರೀತಿಯನ್ನು ನೀವೆಲ್ಲರೂ ನೋಡಿದ್ದೀರಿ, ಇಂದು ನ್ಯಾಯಾಲಯ ನಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ. ನಾವು ಸದಾ ಸತ್ಯವೇ ಗೆಲ್ಲುತ್ತದೆ ಎಂದು ಹೇಳಿಕೊಂಡು ಬಂದಿದ್ದೆವು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಮ್ ಆದ್ಮಿ ಪಕ್ಷದ ವಿರುದ್ಧ ಸಂಚು ರೂಪಿಸಿ, ಪಕ್ಷದ ಐವರು ಪ್ರಮುಖ ನಾಯಕರನ್ನು ಬಂಧಿಸಿದರು. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಯನ್ನೇ ಬಂಧಿಸಲಾಯಿತು. ಪ್ರತಿಯೊಂದು ಚಾನೆಲ್ನಲ್ಲಿ ನಮ್ಮನ್ನು ಭ್ರಷ್ಟರೆಂದು ಕರೆಯಲಾಯಿತು. ಕೇಜ್ರಿವಾಲ್ ಭ್ರಷ್ಟನಲ್ಲ. ನಾನು ಸಂಪಾದಿಸಿರುವುದು ಪ್ರಾಮಾಣಿಕತೆ ಮಾತ್ರ. ಇಂದು ನ್ಯಾಯಾಲಯವೇ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಎಎಪಿ ಪ್ರಾಮಾಣಿಕರು ಎಂದು ಹೇಳಿದೆ ಎಂದು ಕಣ್ಣೀರು ಹಾಕುತ್ತ ನುಡಿದರು.
VIDEO | AAP national convenor Arvind Kejriwal (@ArvindKejriwal) breaks down as he addresses media after appearing before Rouse Avenue Court over the Delhi Excise Policy case. He says, “For the past few years, the way BJP has been accusing us in the Delhi excise policy case, today… pic.twitter.com/jtREb0JyVi
— Press Trust of India (@PTI_News) February 27, 2026
ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಇನ್ನೂ 21 ಮಂದಿಗೆ ವಿನಾಯಿತಿ ನೀಡಿದರು. ಆರೋಪಪಟ್ಟಿಯಲ್ಲಿ ಸಾಕ್ಷ್ಯಾಧಾರಗಳಿಲ್ಲದೆ ಹಲವು ಕೊರತೆಗಳಿವೆ ಎಂದು ನ್ಯಾಯಾಲಯ ಹೇಳಿದೆ.
ಹಿಂದಿನ ಆಪ್ ಸರ್ಕಾರದ ಈಗ ರದ್ದುಪಡಿಸಲಾದ ಅಬಕಾರಿ ನೀತಿಯ ಜಾರಿಗೆ ಸಂಬಂಧಿಸಿದ ಆರೋಪಿತ ಭ್ರಷ್ಟಾಚಾರದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.
PHOTO | AAP national convenor Arvind Kejriwal and party leader Manish Sisodia celebrate with family members after a Delhi court discharged them in an excise police-related corruption case, refusing to take cognisance of the CBI chargesheet.
(Source: Third Party) pic.twitter.com/JLZn2hqs8Q
— Press Trust of India (@PTI_News) February 27, 2026
