ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸೆನ್ಸೇಷನ್ ಕ್ರಿಯೆಟ್ ಮಾಡ್ತಿರುತ್ತಾರೆ. ಇದೀಗ ಮದುವೆ ಯಾವಾಗ? ಮದುವೆಯಾಗುವ (Wedding) ಹುಡುಗ ಹೇಗಿರಬೇಕು ಎಂದು ಕೇಳಿದ್ರೆ, ಕನ್ನಡದ ಶ್ಯಾನೆ ಟಾಪ್ ನಟಿ ಅದಿತಿ ಅವರ ಪತಿ ಯಶಸ್ ಕಡೆ ಬೆಟ್ಟು ತೋರಿಸಿದ್ದಾರೆ.
ಸಂದರ್ಶನದಲ್ಲಿ ಮದುವೆ ಬಗ್ಗೆ ಸೋನು ಮಾತನಾಡಿ, ಮೊದಲಿಗೆ ಮದುವೆ ಅನ್ನೋದು ನನ್ನ ತಲೆಯಲ್ಲಿ ಇಲ್ಲ. ಆದರೆ ನಮ್ಮ ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅಂದರೆ ತುಂಬಾ ಇಷ್ಟ. ಹುಡುಗಿಯರಿಗೆ ಹುಡುಗಿಯರೇ ಕ್ರಶ್ ಆದರೆ ಯಾರು ಅಂತಾ ಕೇಳಿದ್ರೆ? ನಾನು ಅದಿತಿ ಮೇಡಂ ಎನ್ನುತ್ತೇನೆ. ಅವರು ಮಾತನಾಡುವ ರೀತಿ, ತೊಡುವ ಬಟ್ಟೆ ನನಗಿಷ್ಟ ಎಂದು ಸೋನು ಮಾತನಾಡಿದ್ದಾರೆ.
ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಅವರ ಗಂಡನ ಥರ ಇರಬೇಕು. ಅದಿತಿ- ಯಶಸ್ ಬಾಂಧವ್ಯ ನೋಡಿದ್ರೆ ಖುಷಿಯಾಗುತ್ತದೆ. ಇಬ್ಬರ ಫೋಟೋ, ವಿಡಿಯೋ ನೋಡಿದಾಗ ನನಗೂ ಅದಿತಿ ಗಂಡನ ಥರ ಹುಡುಗ ಬೇಕು ಅನಿಸುತ್ತದೆ ಎಂದು ಮದುವೆಯಾಗುವ ಹುಡುಗನ ಬಗೆಗಿನ ಕನಸನ್ನು ಬಿಚ್ಚಿಟ್ಟಿದ್ದಾರೆ
The post ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ್ ಪತಿ ತರ ಇರಬೇಕು: ಸೋನುಗೌಡ appeared first on Ain Live News.