ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಶಕ್ತಿಪ್ರದರ್ಶನ ನಡೆಯಿತು. ಇದರ ಭಾಗವಾಗಿ ಸೋನಿಯಾ ಗಾಂಧಿ ಡಿನ್ನರ್ ಪಾರ್ಟಿಗೆ ಸ್ಪೀಕರ್ ಯು.ಟಿ ಖಾದರ್ ಹೋಗಿದ್ದರು. ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಶಕ್ತಿಪ್ರದರ್ಶನ ನಡೆಯಿತು. ಇದರ ಭಾಗವಾಗಿ ಸೋನಿಯಾ ಗಾಂಧಿ ಡಿನ್ನರ್ ಪಾರ್ಟಿಗೆ ಸ್ಪೀಕರ್ ಯು.ಟಿ ಖಾದರ್ ಹೋಗಿದ್ದರು.
ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸುವಾಗ ಬಿಜೆಪಿ ನಾಯಕರು ನೀವು ಸೋನಿಯಾ ಗಾಂಧಿ ಮೀಟ್ ಮಾಡಿದ್ರಂತೆ, ಡಿನ್ನರ್ ಪಾರ್ಟಿಗೆ ಹೋಗಿದ್ರಂತೆ ಎಂದು ಸ್ಪೀಕರ್ಗೆ ಕೇಳಿದ್ರು. ಈ ಸ್ಥಾನದಲ್ಲಿದ್ದೂ ಡಿನ್ನರ್ ಪಾರ್ಟಿಗೆ ಹೋಗೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸ್ಪೀಕರ್ ಯು.ಟಿ. ಖಾದರ್ ಗೆ ‘ದಿ ಗ್ರೇಟ್ ಸನ್ ಆಫ್ ಇಂಡಿಯಾ’ ಪ್ರಶಸ್ತಿ
ಮಹಾಘಟಬಂಧನ್ ನಾಯಕರ ಡಿನ್ನರ್ ಪಾರ್ಟಿಗೆ ಹೋಗಿದ್ದ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಪ್ರಶ್ನೆಗೆ ಉತ್ತರಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ನಾನೂ ಕೂಡ ಮನುಷ್ಯ, ನೀವು ಕರೆದರೂ ಊಟಕ್ಕೆ ಬರುತ್ತೇನೆ ಎಂದರು. ಮುಖ್ಯಮಂತ್ರಿಯವರು ನಿನ್ನೆ ರಾತ್ರಿ ಔತಣಕೂಟಕ್ಕೆ ಕರೆದಿದ್ದರು. ಆದ್ದರಿಂದ ವೆಸ್ಟ್ ಎಂಡ್ ಹೊಟೇಲ್‌ಗೆ ಹೋಗಿದ್ದೆ. ಅದರಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಶ್ನೆ ಇಲ್ಲ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಇದನ್ನೂ ಓದಿ: ವಿಧಾನಸೌಧ, ರಾಜಭವನ ಸುತ್ತಲಿನ ಭದ್ರತೆಗೆ ಹೊಸ ತಂತ್ರಜ್ಞಾನ: ಸ್ಪೀಕರ್ ಖಾದರ್
‘ವೆಸ್ಟ್‌ಎಂಡ್ ಹೊಟೇಲ್‌ನಲ್ಲಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ್ದೀರಿ ಎಂದು ಪತ್ರಿಕೆಗಳಲ್ಲಿ ಬಂದಿದೆ. ನೀವು ಸಭಾಧ್ಯಕ್ಷರು ಸ್ಥಾನದಲ್ಲಿ ಕುಳಿತ ಬಳಿಕ ಪಕ್ಷಾತೀತರಾಗುತ್ತೀರಿ. ಯಾವುದೇ ಪಕ್ಷದ ಹಂಗಿಗೂ ಒಳಗಾಗಬಾರದು. ಆ ರೀತಿ ಭೇಟಿ ಮಾಡುವುದು ಸರಿಯಲ್ಲ’ ಎಂದು ಜ್ಞಾನೇಂದ್ರ ಹೇಳಿದರು.