Home ಅಪರಾಧ ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

71
0

ಆನೇಕಲ್:

ಬೆಳ್ಳಂ ಬೆಳಗ್ಗೆ ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ.

ಅವಡದೇವನಹಳ್ಳಿಯಲ್ಲಿ ಗೋಪಿ, ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದರೇ, ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವನ ಮೇಲೆ ಫೈರಿಂಗ್ ಮಾಡಿದ್ದಾರೆ.

ಅ. 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಮಾಡಿದ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆನೇಕಲ್ ಠಾಣೆ ಪೊಲೀಸರು ಅವಡದೇವನಹಳ್ಳಿಯಲ್ಲಿದ್ದ ಆರೋಪಿಗಳಾದ ಗಂಗಾ ಮತ್ತು ಗೋಪಿಯನ್ನು ಶರಣಾಗುವಂತೆ ಸೂಚಿಸಿದ್ದರು. ಆದರೆ, ಪೊಲೀಸರ ಮಾತಿಗೆ ಕ್ಯಾರೇ ಎನ್ನದ ಆರೋಪಿಗಳು ಪೇದೆಗಳಾದ ಮಹೇಶ್ ಮತ್ತು ಸುರೇಶ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದರು. ಹೀಗಾಗಿ ಆತ್ಮರಕ್ಷಣೆಗಾಗಿ ಆನೇಕಲ್ ಡಿವೈಎಸ್‌ಪಿ ಮಹಾದೇವ್ ಮತ್ತು ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here