Home Uncategorized ನಾಳೆ(ಜ.20) ಬಜೆಟ್ ಪೂರ್ವಭಾವಿ ಚರ್ಚೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ

ನಾಳೆ(ಜ.20) ಬಜೆಟ್ ಪೂರ್ವಭಾವಿ ಚರ್ಚೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ

5
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೆ ಸಾಲಿನ ಇಲಾಖಾವಾರು ಬಜೆಟ್ ಪೂರ್ವಭಾವಿ ಚರ್ಚೆಯನ್ನು ಜ.20ರಂದು ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ರಾಜ್ಯ ವಿದ್ಯುತ್ ನಿಗಮದ ಸಭಾಂಗಣದಲ್ಲಿ ನಡೆಸಲಿದ್ದಾರೆ.

ಜ.20ರಂದು ಮಧ್ಯಾಹ್ನ 12 ರಿಂದ 12.30ರ ವರೆಗೆ ಆರೋಗ್ಯ ಇಲಾಖೆ, 12.30ರಿಂದ 1 ಗಂಟೆಯ ವರೆಗೆ ತೋಟಗಾರಿಕೆ ಇಲಾಖೆ, 1 ಗಂಟೆಯಿಂದ 1.30ರ ವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, 1.30 ರಿಂದ 2 ಗಂಟೆಯ ವರೆಗೆ ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆ, 2 ಗಂಟೆಯಿಂದ 2.30ರವರೆಗೆ ಯೋಜನೆ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.

ಸಂಜೆ 4 ರಿಂದ 4.30ರವರೆಗೆ ಉನ್ನತ ಶಿಕ್ಷಣ, 4.30 ರಿಂದ 5ರವರೆಗೆ ಬೆಂಗಳೂರು ಅಭಿವೃದ್ಧಿ, ಸಂಜೆ 5 ರಿಂದ 5.30ರವರೆಗೆ ಜಲಸಂಪನ್ಮೂಲ ಇಲಾಖೆ, 5.30 ರಿಂದ 6 ಗಂಟೆಯವರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ, 6 ಗಂಟೆಯಿಂದ 6.20ರವರೆಗೆ ಅರಣ್ಯ ಇಲಾಖೆ, 6.20 ರಿಂದ 6.50ರವರೆಗೆ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ.

ಸಂಜೆ 6.50 ರಿಂದ 7.20ರವರೆಗೆ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ರಾತ್ರಿ 7.20 ರಿಂದ 7.50ರವರೆಗೆ ಸಹಕಾರ(ಕೃಷಿ ಮಾರುಕಟ್ಟೆ ಸೇರಿದಂತೆ) ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here