Home Uncategorized ನಾಸಾಕ್ಕೆ ಹೊರಟ ಬೆಂಗಳೂರಿನ ವಿದ್ಯಾರ್ಥಿನಿಯರಿಗೆ ಕ್ಷಿಪ್ರ ಸಮಯದಲ್ಲಿ ಕೈಗೆ ಸಿಕ್ಕಿದ ಪಾಸ್ ಪೋರ್ಟ್!

ನಾಸಾಕ್ಕೆ ಹೊರಟ ಬೆಂಗಳೂರಿನ ವಿದ್ಯಾರ್ಥಿನಿಯರಿಗೆ ಕ್ಷಿಪ್ರ ಸಮಯದಲ್ಲಿ ಕೈಗೆ ಸಿಕ್ಕಿದ ಪಾಸ್ ಪೋರ್ಟ್!

29
0

ಮೇ 25ರಿಂದ 28ರವರೆಗೆ ನಡೆಯಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನ-2023ಕ್ಕೆ ತಮ್ಮ ಮಕ್ಕಳು ಆಯ್ಕೆಯಾಗಿದ್ದಾರೆ ಎಂದು ವಾರದ ಹಿಂದೆ ಪೋಷಕರಿಗೆ ಗೊತ್ತಾಯಿತು. ಬೆಂಗಳೂರು: ಮೇ 25ರಿಂದ 28ರವರೆಗೆ ನಡೆಯಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನ-2023ಕ್ಕೆ ತಮ್ಮ ಮಕ್ಕಳು ಆಯ್ಕೆಯಾಗಿದ್ದಾರೆ ಎಂದು ವಾರದ ಹಿಂದೆ ಪೋಷಕರಿಗೆ ಗೊತ್ತಾಯಿತು. ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳ ಪಾಲಕರಿಗೆ ಏನು ಮಾಡುವುದೆಂದೇ ಗೊತ್ತಾಗಲಿಲ್ಲ. ಮಕ್ಕಳ ಕೈಯಲ್ಲಿ ಪಾಸ್ ಪೋರ್ಟ್ ಕೂಡ ಇರಲಿಲ್ಲ. 

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಬಿ ಇ ಶಶಿಕಲಾ ಬಾಯಿ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ ಕೃಷ್ಣ ಮತ್ತು ಡೆಪ್ಯೂಟಿ ಪಾಸ್‌ಪೋರ್ಟ್ ಅಧಿಕಾರಿ ಎ ರಾಜೇಶ್ವರಿ ಅವರ ಕ್ಷಿಪ್ರ ಕೆಲಸ ಬುದ್ದಿವಂತಿಕೆಯಿಂದ ಮಕ್ಕಳಿಗೆ ಅತ್ಯಲ್ಪ ಸಮಯದಲ್ಲಿ  ಪಾಸ್ ಪೋರ್ಟ್ ಸಿಕ್ಕಿದೆ. ಈಗ ತಮ್ಮ ಮಕ್ಕಳನ್ನು ಯುಎಸ್ ಗೆ ವೀಸಾದೊಂದಿಗೆ ಪೋಷಕರು ಕಳುಹಿಸಲು ಸಜ್ಜಾಗಿದ್ದಾರೆ. 

8 ನೇ ತರಗತಿ ವಿದ್ಯಾರ್ಥಿನಿ ಡಿ ಬೆಲಿಟಾ ರಾಸ್ ಮತ್ತು 9 ನೇ ತರಗತಿ ವಿದ್ಯಾರ್ಥಿನಿ ಶಶಿಕಾ ರಾಮಸ್ವಾಮಿ ಅವರ ಕುಟುಂಬಸ್ಥರು ಖುಷಿಯಾಗಿದ್ದಾರೆ. 

ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಬೆಲಿಟಾ ಪಾಸ್‌ಪೋರ್ಟ್ ಪಡೆದರು. ಆಕೆಯ ತಾಯಿ, ಗೃಹಿಣಿ ನಿನಿತಾ ಅಶ್ವಿನಿ, “ಅಧಿಕಾರಿಗಳ ಪಾರದರ್ಶಕ ದಕ್ಷತೆಯ ಕೆಲಸವನ್ನು ಶ್ಲಾಘಿಸಲು ನನಗೆ ಪದಗಳೇ ಸಿಗುತ್ತಿಲ್ಲ, ಪಾಸ್‌ಪೋರ್ಟ್ ಕಚೇರಿಯಲ್ಲಿದ್ದ ಎಲ್ಲರೂ ನಮಗೆ ಸಹಾಯ ಮಾಡಿದ್ದಾರೆ ಎಂದರು. 

ಸೀರೆಗೆ ಡೈಯಿಂಗ್ ಹಾಕುವ ವ್ಯಾಪಾರ ಮಾಡುತ್ತಿರುವ ಶಶಿಕಾ ಅವರ ತಂದೆ ಸೋಮವಾರ ಮಗಳೊಂದಿಗೆ ಪಾಸ್‌ಪೋರ್ಟ್ ಕಚೇರಿಗೆ ಹೋಗಿದ್ದರು. ಆಗ ಶಾಲೆಯ ಪ್ರಾಂಶುಪಾಲರು ಕರೆ ಮಾಡಿ ನಮಗೆ ಸಹಾಯ ಮಾಡುವಂತೆ ಸ್ಥಳೀಯ ಪಾಸ್ ಪೋರ್ಟ್ ಅಧಿಕಾರಿಗೆ ಮನವಿ ಮಾಡಿದರು. RPO ನಮಗೆ ತಕ್ಷಣದ ಅಪಾಯಿಂಟ್ಮೆಂಟ್ ನೀಡಿದರು. ಇವತ್ತು ನಮಗೆ ಪಾಸ್‌ಪೋರ್ಟ್ ಸುಲಭವಾಗಿ ಸಿಕ್ಕಿದೆ ಎಂದರು. 

 

ಆಕೆಯ ತಾಯಿ ಸುದಾಮಣಿ ಆರ್, “ಪಾಸ್‌ಪೋರ್ಟ್ ಇಲ್ಲದೆ  ಈ ಸುವರ್ಣಾವಕಾಶವನ್ನು ನಾವು  ಕಳೆದುಕೊಳ್ಳುತ್ತೇವೆ ಎಂಬ ಚಿಂತೆಯಾಗಿತ್ತು. ಮಗಳು 6 ನೇ ತರಗತಿಯಲ್ಲಿದ್ದಾಗೆ ಒಮ್ಮೆ ಆಯ್ಕೆಯಾದಳು, ಆದರೆ  ಕೋವಿಡ್‌ನಿಂದಾಗಿ ಹೋಗಲು ಸಾಧ್ಯವಾಗಿರಲಿಲ್ಲ ಎಂದರು. 

ಇದನ್ನೂ ಓದಿ: ಮಾರ್ಚ್ ಒಂದೇ ತಿಂಗಳಲ್ಲಿ 79,000 ಪಾಸ್’ಪೋರ್ಟ್ ವಿತರಣೆ, ದಾಖಲೆ

ಸಮೂಹ ಯೋಜನೆಯನ್ನು ವಿವರಿಸಿದ ಶಶಿಕಾ, “ನಾಸಾ ಬಾಹ್ಯಾಕಾಶಕ್ಕೆ ಕಳುಹಿಸುವ ಉಪಗ್ರಹಗಳನ್ನು ನಾವು ಪ್ರದರ್ಶಿಸಿದ್ದೇವೆ. ಕೆಲಸದಲ್ಲಿ ತೊಡಗಿರುವ ಶ್ರೇಷ್ಠ ವಿಜ್ಞಾನಿಗಳನ್ನು ಭೇಟಿಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎನ್ನುತ್ತಾಳೆ. 

ಸತತ ಮೂರನೇ ಬಾರಿ ಪ್ರಯತ್ನದಲ್ಲಿ ಆಯ್ಕೆಯಾಗಿದ್ದೇನೆ ಎಂದು ಬೆಲಿಟಾ ಹೇಳುತ್ತಾಳೆ. ಈ ಇಬ್ಬರು ವಿದ್ಯಾರ್ಥಿನಿಯರ ಜೊತೆಗೆ ಇತರ ಆರು ಮಂದಿ – ಏಂಜಲ್ ದಧಿಚ್, ಆಶಿತಾ ಆರ್, ಅದ್ವಿಕ್ ಶುಕ್ಲಾ, ದಿನೇಶ್ ಕಾರ್ತಿಕೇಯ, ಗಾಲಿ ಕೌಶಿಕ್ ರೆಡ್ಡಿ ಮತ್ತು ಎಲ್ ಪಿ ಅವಿಕ್ಷಿತ್ ತಮ್ಮ ಪ್ರಾಂಶುಪಾಲರೊಂದಿಗೆ ನಾಸಾ ಸಮ್ಮೇಳನಕ್ಕೆ ಹೋಗುತ್ತಿದ್ದಾರೆ.

LEAVE A REPLY

Please enter your comment!
Please enter your name here