Home Uncategorized ನಿನ್ನೆ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ: ಇಂದು ತಡೆ ಹಿಡಿದ ಸರ್ಕಾರ

ನಿನ್ನೆ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ: ಇಂದು ತಡೆ ಹಿಡಿದ ಸರ್ಕಾರ

41
0

ನಿನ್ನೆ ವರ್ಗಾವಣೆಗೊಂಡಿದ್ದ ಕೆಲ ಇನ್ಸ್​​ಪೆಕ್ಟರ್​ಗಳ ವರ್ಗಾವಣೆಗೆ ಸರ್ಕಾರ ತಡೆ ಹಿಡಿದಿದೆ. ಮಂಗಳವಾರ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಸರ್ಕಾರ ವರ್ಗಾವಣೆ ದಂಧೆಯನ್ನು ಆರಂಭಿಸಿದೆ ಎಂದು ವಿಪಕ್ಷಗಳಿಂದ ಗಂಭೀರ ಟೀಕೆಗೆ ಒಳಗಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ  ರಾಜ್ಯದ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ್ದ ಸರ್ಕಾರ, ಈಗ 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆಹಿಡಿದ ಆದೇಶ ವಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

ಇದನ್ನೂ ಓದಿ: 4 ಐಎಎಸ್ ಅಧಿಕಾರಿಗಳ ವರ್ಗಾವಣೆ 

ನಿನ್ನೆ ವರ್ಗಾವಣೆಗೊಂಡಿದ್ದ ಕೆಲ ಇನ್ಸ್​​ಪೆಕ್ಟರ್​ಗಳ ವರ್ಗಾವಣೆಗೆ ಸರ್ಕಾರ ತಡೆ ಹಿಡಿದಿದೆ. ಮಂಗಳವಾರ ರಾಜ್ಯಾದ್ಯಂತ 211 ಪೊಲೀಸ್ ಇನ್ಸ್​​​​ಪೆಕ್ಟರ್​​​​​​​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ ಇಂದು ಬೆಳಗ್ಗೆ ಸರ್ಕಾರದಿಂದ ದಿಢೀರ್ ತಡೆ ಹಿಡಿಯಲಾಗಿದೆ. ವರ್ಗಾವಣೆ ಆದೇಶ ಬರುತ್ತಿದ್ದಂತೆ ಇಂದು ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದ 11 ಇನ್ಸ್ ಪೆಕ್ಟರ್​​​ಗಳ ವರ್ಗಾವಣೆಗೆ ಬೆಳ್ಳಂಬೆಳಗ್ಗೆ ತಡೆ ನೀಡಲಾಗಿದೆ.

ಇದನ್ನೂ ಓದಿ: ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಬೆನ್ನಲ್ಲೇ 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ

ವರ್ಗಾವಣೆ ಆದೇಶ ಬರ್ತಿದ್ದಂತೆ ಹಲವು ಬೆಳಗಾಗುವುದರೊಳಗೆ 11 ಇನ್ಸ್ ಪೆಕ್ಟರ್‌ಗಳು ಹಾಗೂ ಮಧ್ಯಾಹ್ನದ ವೇಳೆ ಪುನಃ 8 ಇನ್ಸ್‌ಪೆಕ್ಟರ್‌ಗಳು ಸೇರಿ ಒಟ್ಟು 19 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here