ಕಾಂಗ್ರೆಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಸಂಸತ್ತಿನ ಭಾಷಣವನ್ನು ತೀವ್ರವಾಗಿ ಟೀಕಿಸಿ, ಅದನ್ನು “ತಮ್ಮ ಆತಿಥೇಯ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಪರದ ನಿರ್ಲಜ್ಜ ಸಮರ್ಥನೆ ಎಂದು ಕರೆದಿದೆ.
ವಿರೋಧ ಪಕ್ಷ ಕಾಂಗ್ರೆಸ್, ಇಸ್ರೇಲ್ ರಚನೆ ಕುರಿತು ಭಾರತದ ಮೊದಲ ಪ್ರಧಾನಮಂತ್ರಿ ಜವಹರಲಾಲ್ ನೆಹರೂ ಅವರ ಅಭಿಪ್ರಾಯಗಳನ್ನು ಕೂಡ ಉಲ್ಲೇಖಿಸಿತು. ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ ಸ್ಟ್ರೈನ್ ಅವರೊಂದಿಗೆ ನಡೆದ ಪತ್ರ ವ್ಯವಹಾರವನ್ನು ನೆನಪಿಸಿಕೊಂಡಿದೆ.
ನಿನ್ನೆ ಇಸ್ರೇಲ್ ಸಂಸತ್ತು ಉದ್ದೇಶಿಸಿ ಮಾತನಾಡಿದ ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮೋದಿ ಅವರ ಹೇಳಿಕೆಗಳನ್ನು ಖಂಡಿಸಿದರು.
कल कनेसेट में दिए गए अपने संबोधन में-जो उनके मेज़बान का खुला बचाव था प्रधानमंत्री मोदी ने इस तथ्य पर ध्यान दिलाया कि जिस दिन उनका जन्म हुआ था, उसी दिन भारत ने इजरायल को एक नए राष्ट्र के रूप में मान्यता दी थी।
दरअसल, 13 जून 1947 को अल्बर्ट आइंस्टीन ने इजरायल की स्थापना के विषय पर… pic.twitter.com/YErtVU8yLs
— Jairam Ramesh (@Jairam_Ramesh) February 26, 2026
ನಿನ್ನೆ ಮೋದಿಯವರು ತಮ್ಮ ಆತಿಥೇಯರ ಪರ ನಿರ್ಲಜ್ಜ ಸಮರ್ಥನೆ ಮಾಡಿಕೊಂಡಿದ್ದರು. ಪ್ರಧಾನಮಂತ್ರಿ ಮೋದಿ, ತಾವು ಜನಿಸಿದ ದಿನವೇ ಭಾರತವು ಹೊಸ ಇಸ್ರೇಲ್ ರಾಷ್ಟ್ರವನ್ನು ಮಾನ್ಯತೆ ನೀಡಿದ ವಿಷಯವನ್ನು ಉಲ್ಲೇಖಿಸಿದರು.
ಆದರೆ 1949 ನವೆಂಬರ್ 5ರಂದು ಪ್ರಿನ್ಸ್ಟನ್ನಲ್ಲಿ ಐನ್ಸ್ಟೈನ್ ಅವರ ಮನೆಯಲ್ಲಿ ನೆಹರು ಮತ್ತು ಐನ್ಸ್ಟೈನ್ ಭೇಟಿಯಾದ ಸಂಗತಿಯನ್ನು ಇಲ್ಲಿ ಜೈರಾಂ ರಮೇಶ್ ಉಲ್ಲೇಖಿಸಿದರು. 1952 ನವೆಂಬರ್ನಲ್ಲಿ ಇಸ್ರೇಲ್ ಅಧ್ಯಕ್ಷರಾಗುವ ಆಹ್ವಾನವನ್ನು ಐನ್ಸ್ಟೈನ್ ತಿರಸ್ಕರಿಸಿದ್ದನ್ನೂ, 1955 ಏಪ್ರಿಲ್ನಲ್ಲಿ ತಮ್ಮ ನಿಧನಕ್ಕೂ ಮುನ್ನ ನೆಹರು ಅವರೊಂದಿಗೆ ಅಣ್ವಸ್ತ್ರಗಳ ಬಗ್ಗೆ ಪತ್ರ ವ್ಯವಹಾರ ನಡೆಸಿದ್ದನ್ನೂ ನೆನಪಿಸಿಕೊಂಡರು.
ಯಹೂದ್ಯರ ಬಗ್ಗೆ ನನಗೆ ಅಪಾರ ಸಹಾನುಭೂತಿ ಇದೆ ಎಂದು ಒಪ್ಪುತ್ತೇನೆ. ಆದರೆ ಅರಬ್ ದೇಶದವರ ಸಂಕಷ್ಟದ ಪರಿಸ್ಥಿತಿ ಬಗ್ಗೆ ಕೂಡ ನನಗೆ ಸಹಾನುಭೂತಿ ಇದೆ. ಯಾವ ರೀತಿಯಲ್ಲಾದರೂ, ಈ ಸಂಪೂರ್ಣ ವಿಷಯವು ಎರಡೂ ಕಡೆಯವರಿಗೆ ಭಾವೋದ್ರೇಕ ಮತ್ತು ಭಾವನೆಗಳ ವಿಷಯವಾಗಿದೆ ಎಂದು 1947ರ ಜುಲೈ 11ರಂದು ಐನ್ ಸ್ಟೈನ್ ಅವರಿಗೆ ನೆಹರು ಬರೆದ ಪ್ರತಿಕ್ರಿಯೆಯನ್ನು ಜೈರಾಂ ರಮೇಶ್ ಉಲ್ಲೇಖಿಸಿದ್ದಾರೆ.
ಭಾರತದ ಮೊದಲ ಪ್ರಧಾನಮಂತ್ರಿ ಬರೆದಂತೆ, “ಎರಡೂ ಕಡೆಯವರು ನ್ಯಾಯಯುತ ಮತ್ತು ಪರಸ್ಪರ ಒಪ್ಪಿಗೆಯ ಪರಿಹಾರಕ್ಕೆ ಸಿದ್ಧರಾಗದಿದ್ದರೆ, ತಕ್ಷಣದ ಪರಿಣಾಮಕಾರಿ ಪರಿಹಾರ ಕಾಣುವುದಿಲ್ಲ.”
ಪ್ಯಾಲೆಸ್ತೀನ್ ಸಮಸ್ಯೆಗೆ ನಾನು ಸಾಕಷ್ಟು ಗಮನಹರಿಸಿದ್ದೇನೆ. ಎರಡೂ ಕಡೆಯವರ ಪುಸ್ತಕಗಳು ಮತ್ತು ಪ್ರಕಟಣೆಗಳನ್ನು ಓದಿದ್ದೇನೆ. ಆದರೂ ಅಂತಿಮ ಅಭಿಪ್ರಾಯ ನೀಡಲು ನಾನು ಸಂಪೂರ್ಣವಾಗಿ ತಿಳಿದವನೆಂದು ಹೇಳಲು ಸಾಧ್ಯವಿಲ್ಲ. ಯಹೂದ್ಯರು ಪ್ಯಾಲೆಸ್ತೀನ್ ನಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ, ಅಲ್ಲಿ ಜನರ ಜೀವನಮಟ್ಟವನ್ನು ಹೆಚ್ಚಿಸಿದ್ದಾರೆ ಎಂಬುದು ನಿಜ. ಆದರೆ ಒಂದು ಪ್ರಶ್ನೆ ನನ್ನನ್ನು ಕಾಡುತ್ತದೆ — ಇಂತಹ ಸಾಧನೆಗಳ ಬಳಿಕವೂ ಅವರು ಅರಬರ ವಿಶ್ವಾಸವನ್ನು ಏಕೆ ಗಳಿಸಲಿಲ್ಲ?
ಕೆಲವು ಬೇಡಿಕೆಗಳಿಗೆ ಅರೆಬರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಏಕೆ ಒಪ್ಪಿಸಲು ಅವರು ಬಯಸುತ್ತಾರೆ? ಈ ರೀತಿಯ ಪರಿಹಾರಕ್ಕೆ ದಾರಿ ಮಾಡಿಕೊಡುವುದಿಲ್ಲ; ಬದಲಾಗಿ ಸಂಘರ್ಷದ ಮುಂದುವರಿಕೆಗೆ ಕಾರಣವಾಗುತ್ತದೆ. ತಪ್ಪು ಒಂದೇ ಪಾಳಯಕ್ಕೆ ಸೀಮಿತವಾಗಿಲ್ಲ; ಎಲ್ಲರೂ ತಪ್ಪು ಮಾಡಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ ಎಂದು ನೆಹರೂ ಬರೆದಕೊಂಡಿದ್ದನ್ನು ಇಲ್ಲಿ ಜೈರಾಂ ರಮೇಶ್ ನೆನಪಿಸಿಕೊಂಡಿದ್ದಾರೆ.
ಪ್ಯಾಲೆಸ್ತೀನ್ ನಲ್ಲಿ ಬ್ರಿಟಿಷರ ಆಳ್ವಿಕೆ ಮುಂದುವರಿದಿದ್ದುದೇ ಪ್ರಮುಖ ಅಡಚಣೆಯಾಗಿದೆ ಎಂದು ನೆಹರು ಅಭಿಪ್ರಾಯಪಟ್ಟಿದ್ದರು ಎಂದಿದ್ದಾರೆ.
