Home ಕರ್ನಾಟಕ ನಿರುದ್ಯೋಗಿಗಳ ಪ್ರಮಾಣ ಈ ರಾಜ್ಯದಲ್ಲಿ ಅಧಿಕ; ಈ ರಾಜ್ಯದಲ್ಲಿ ಕನಿಷ್ಠ

ನಿರುದ್ಯೋಗಿಗಳ ಪ್ರಮಾಣ ಈ ರಾಜ್ಯದಲ್ಲಿ ಅಧಿಕ; ಈ ರಾಜ್ಯದಲ್ಲಿ ಕನಿಷ್ಠ

23
0

ಹೊಸದಿಲ್ಲಿ: 2024ರ ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ದೆಹಲಿಯಲ್ಲಿ ಕನಿಷ್ಠ ಹಾಗೂ ಕೇರಳದಲ್ಲಿ ಗರಿಷ್ಠ ಎನ್ನುವುದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

15-29 ವರ್ಷ ವಯೋವರ್ಗದಲ್ಲಿ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿಯತಕಾಲಿಕ ಕಾರ್ಮಿಕ ಶಕ್ತಿ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಜಮ್ಮು & ಕಾಶ್ಮೀರ, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾದಲ್ಲಿ ನಿರುದ್ಯೋಗ ದರ ಅತ್ಯಧಿಕ. ಗರಿಷ್ಠ ನಿರುದ್ಯೋಗ ಹೊಂದಿರುವ ರಾಜ್ಯಗಳ ಪೈಕಿ ಇವು ಕ್ರಮವಾಗಿ ಎರಡರಿಂದ ಐದನೇ ಸ್ಥಾನದಲ್ಲಿವೆ.

15-29 ವಯೋಮಿತಿಯಲ್ಲಿ ಈ ಅವಧಿಯ ಒಟ್ಟಾರೆ ನಿರುದ್ಯೋಗಿಗಳ ಪ್ರಮಾಣ ಶೇಕಡ 17ರಷ್ಟಿದ್ದು, ಇದು ಹಿಂದಿನ ತ್ರೈಮಾಸಿಕಕ್ಕೆ ಹೊಲಿಸಿದರೆ ಶೇಕಡ 0.5ರಷ್ಟು ಅಧಿಕ. 2023ರ ಜನವರಿ-ಮಾರ್ಚ್ ಅವಧಿಗೆ ಹೋಲಿಸಿದರೆ ಶೇಕಡ 0.3ರಷ್ಟು ಕಡಿಮೆ.

ಎಲ್ಲ ವಯೋಗುಂಪುಗಳಲ್ಲಿ ಒಟ್ಟಾರೆ ನಿರುದ್ಯೋಗ ಪ್ರಮಾಣ ಈ ತ್ರೈಮಾಸಿಕದಲ್ಲಿ ಶೇಕಡ 6.7ರಷ್ಟಿದ್ದು, ಇದು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 0.2ರಷ್ಟು ಅಧಿಕ. 2023ರ ಜನವರಿ- ಮಾರ್ಚ್ ಅವಧಿಯಲ್ಲಿ ಒಟ್ಟಾರೆ ನಿರುದ್ಯೋಗ ದರ ಶೇಕಡ 6.8ರಷ್ಟಿತ್ತು.

ಒಟ್ಟು 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ (3.1%), ಗುಜರಾತ್ (9%) ಮತ್ತು ಹರ್ಯಾಣ (9.5%) ಮಾತ್ರ ಒಂದಂಕಿ ನಿರುದ್ಯೋಗ ದರ ಹೊಂದಿವೆ. ಕನಿಷ್ಠ ನಿರುದ್ಯೋಗ ಪ್ರಮಾಣ ಹೊಂದಿರುವ ಇತರ ಎರಡು ರಾಜ್ಯಗಳೆಂದರೆ ಕರ್ನಾಟಕ (11.5%) ಮತ್ತು ಮಧ್ಯಪ್ರದೇಶ (12.1%).

LEAVE A REPLY

Please enter your comment!
Please enter your name here