ಆಧುನಿಕ ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತ ಸ್ವಚ್ಛತಾ ಸಾಮರ್ಥ್ಯವುಳ್ಳ ಇ–ಶೌಚಾಲಯವನ್ನು ಕಾಪಾಡಿಕೊಳ್ಳುವುದು ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಬೆಂಗಳೂರು: ಆಧುನಿಕ ತಂತ್ರಜ್ಞಾನ ಆಧಾರಿತ ಸ್ವಯಂಪ್ರೇರಿತ ಸ್ವಚ್ಛತಾ ಸಾಮರ್ಥ್ಯವುಳ್ಳ ಇ–ಶೌಚಾಲಯವನ್ನು ಕಾಪಾಡಿಕೊಳ್ಳುವುದು ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
5-6 ವರ್ಷಗಳ ಹಿಂದೆ ಬಿಬಿಎಂಪಿ ಸಾರ್ವಜನಿಕರ ಶೌಚಾಲಯ ಬಾಧೆಯನ್ನು ತಪ್ಪಿಸುವ ಸಲುವಾಗಿ, ಪರಿಸರ ಸ್ನೇಹಿ ಮತ್ತು ನಗರದ ಪ್ರದೇಶದ ನಾಗರಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ 229 ಕಡೆಗಳಲ್ಲಿ ಇ-ಶೌಚಾಲಯಗಳನ್ನು ನಿರ್ಮಿಸಿತ್ತು. ಆದರೆ, ಈ ಪೈಕಿ ಹಲವು ಶೌಚಾಲಯಗಳು ಸಂಪೂರ್ಣವಾಗಿ ಹದಗೆಟ್ಟು ಬಳಕೆಗೆ ಬಾರದ ಸ್ಥಿತಿಯನ್ನು ತಲುಪಿವೆ.
ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಮಾಡಿರುವ ಯೋಜನೆಗೆ ನಿರ್ವಹಣೆ ಮತ್ತು ವಿದ್ಯುತ್ ಕೊರತೆಯಿಂದಾಗಿ ಸಾರ್ವಜನಿಕರ ಬಳಕೆಗೆ ಸಾಧ್ಯವಾಗುತ್ತಿಲ್ಲ.
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪ್ರತಿ ಇ-ಶೌಚಾಲಯಕ್ಕೆ 5.5 ಲಕ್ಷ ರೂ.ನಂತೆ ಒಟ್ಟು 94 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 229 ಇ-ಶೌಚಾಲಯವನ್ನು ನಿರ್ಮಿಸಿ. ಅವುಗಳ ನಿರ್ವಹಣೆಗೆ ನೀಡಿದ್ದ ಟೆಂಡರ್‍ನ ಕಾಲಾವಧಿ ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಆದೇಶ
ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ ಪ್ರವೀಣ್ ಲಿಂಗಯ್ಯ ಮಾತನಾಡಿ, ‘ಎರಡು ಬಾರಿ ಗುತ್ತಿಗೆ ಕರೆದರೂ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರಿಲ್ಲ. ಹೀಗಾಗಿ ಗುತ್ತಿಗೆ ಹಣವನ್ನು ಹೆಚ್ಚಿಸಿ ಗುತ್ತಿಗೆದಾರರ ಆಕರ್ಷಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪ್ರತಿ ಇ-ಶೌಚಾಲಯಕ್ಕೆ 5.5 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಅದರ ಮಾಸಿಕ ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚ 3,500 ರೂಪಾಯಿಗಳನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಆದರೆ, ಈ ವೆಚ್ಚವನ್ನು ಹೆಚ್ಚಿಸುವಂತೆ ಗುತ್ತಿಗೆದಾರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಸಭೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇ-ಶೌಚಾಲಯಗಳಲ್ಲಿನ ಸಮಸ್ಯೆಗಳಿಂದಾಗಿ ಪೌರಕಾರ್ಮಿಕರೂ ಅನಾನುಕೂಲವನ್ನು ಎದುರಿಸುತ್ತಿದ್ದಾರೆ ಮತ್ತು ಅಂತಹ ಶೌಚಾಲಯಗಳನ್ನು ಅವರು ಸ್ವಚ್ಛಗೊಳಿಸಬೇಕಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆಯ ಅಧಿಕಾರಿಯೊಬ್ಬರು ಹೇಳಿದರು. ಇಂತಹ ಶೌಚಾಲಯಗಳ ನಿರ್ವಹಣೆ ಮತ್ತು ನಿರ್ವಹಣೆಯನ್ನು ಪೌರಕಾರ್ಮಿಕರಿಗೆ ವಹಿಸಬೇಕು ಎಂದು ಕೆಲವರು ಒತ್ತಾಯಿಸಿದರು.
ಶೌಚಾಲಯಗಳ ನಿರ್ವಹಣೆಯನ್ನು ಪೌರಕಾರ್ಮಿಕರಿಗೆ ಹಸ್ತಾಂತರಿಸಲು ನಮ್ಮಲ್ಲಿ ಯಾವುದೇ ನಿಬಂಧನೆಗಳಿಲ್ಲ, ಸದ್ಯಕ್ಕೆ, ಕೆಲವು ಶೌಚಾಲಯಗಳನ್ನು ಸ್ವಚ್ಛವಾಗಿಡಲು ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಹೊಸ ಟೆಂಡರ್ಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿರ್ವಹಣೆಗೆ ಶೌಚಾಲಯಗಳನ್ನು ಹಂಚಿಕೆ ಮಾಡಲಾಗುತ್ತದೆ. ನಂತರ ಗುತ್ತಿಗೆದಾರರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಾರೆಂದು ಅಧಿಕಾರಿಗಳು ಹೇಳಿದ್ದಾರೆ.