ಹೊಸದಿಲ್ಲಿ: ನೀಟ್ ವಿರುದ್ಧ ಡಿಎಂಕೆ ಸಹಿ ಅಭಿಯಾನದ ವಿರುದ್ಧ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಕೇಂದ್ರೀಯ ಯೋಜನೆಯೊಂದಿಗೆ ರಾಷ್ಟ್ರೀಯ ಮಟ್ಟದ ಪರೀಕ್ಷೆಯ ವಿರುದ್ಧ ಇಂತಹ ಅಭಿಯಾನಗಳು ತಿಳುವಳಿಕೆ ಉಳ್ಳ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿದೆ.
‘‘ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ತಿಳುವಳಿಕೆ ಹೊಂದಿದ್ದಾರೆ ಮತ್ತು ಜಾಗೃತರಾಗಿದ್ದಾರೆ. ಕೇಂದ್ರೀಯ ಯೋಜನೆಯೊಂದಿಗೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ವಿರುದ್ಧದ ಇಂತಹ ಅಭಿಯಾನಗಳು ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಚಾರ ಮಾಡಲು ಬಯಸುವವರು ಅದನ್ನು ಮುಂದುವರಿಸಲಿ’’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಹೇಳಿದೆ.
ವಿದ್ಯಾರ್ಥಿಗಳ ಸಹಿ ತೆಗೆದುಕೊಳ್ಳಲು ಪೋಷಕರಿಂದ ಅನುಮತಿ ಪಡೆದಿಲ್ಲ. ಈ ನೆಲೆಯಲ್ಲಿ ನೀಟ್ ವಿರುದ್ಧ ಡಿಎಂಕೆಯ ನೀಟ್ ಸಹಿ ಅಭಿಯಾನವನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಎಂ.ಎಲ್. ರವಿ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದ್ದರು