Home Uncategorized ನೀರಿನೊಳಗೆ ಮುಳುಗಿದ ಪ್ರಯಾಣಿಕರನ್ನು ರಕ್ಷಣೆ ಮಾಡುವುದು ಹೇಗೆ?: ಅಣಕು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ

ನೀರಿನೊಳಗೆ ಮುಳುಗಿದ ಪ್ರಯಾಣಿಕರನ್ನು ರಕ್ಷಣೆ ಮಾಡುವುದು ಹೇಗೆ?: ಅಣಕು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ

50
0

ನೀರಿನೊಳಗೆ ಲೋಹದ ವಸ್ತುಗಳನ್ನು ಕತ್ತರಿಸುವ ಅತ್ಯಾಧುನಿಕ ಉಪಕರಣಗಳನ್ನು ಪ್ರದರ್ಶಿಸಲು ರೈಲ್ವೆ ಬೋಗಿಯೊಳಗೆ ಸಿಕ್ಕಿಹಾಕಿಕೊಂಡ ಮೂರು ಮೃತದೇಹಗಳನ್ನು ಹೊರತೆಗೆಯುವ ಬೃಹತ್ ಅಣಕು ಕಾರ್ಯಾಚರಣೆಯನ್ನು ಹೆಜ್ಜಾಲದಲ್ಲಿ ನಡೆಸಲಾಯಿತು.  ಬೆಂಗಳೂರು: ನೀರಿನೊಳಗೆ ಲೋಹದ ವಸ್ತುಗಳನ್ನು ಕತ್ತರಿಸುವ ಅತ್ಯಾಧುನಿಕ ಉಪಕರಣಗಳನ್ನು ಪ್ರದರ್ಶಿಸಲು ರೈಲ್ವೆ ಬೋಗಿಯೊಳಗೆ ಸಿಕ್ಕಿಹಾಕಿಕೊಂಡ ಮೂರು ಮೃತದೇಹಗಳನ್ನು ಹೊರತೆಗೆಯುವ ಬೃಹತ್ ಅಣಕು ಕಾರ್ಯಾಚರಣೆಯನ್ನು ಹೆಜ್ಜಾಲದಲ್ಲಿ ನಡೆಸಲಾಯಿತು. 

ಭಾರತೀಯ ರೈಲ್ವೇ ವಿಪತ್ತು ನಿರ್ವಹಣಾ ಸಂಸ್ಥೆಯಲ್ಲಿ ವಿಪತ್ತುಗಳನ್ನು ನಿಭಾಯಿಸಲು ಐದು ದಿನಗಳ ವಿಶೇಷ ತರಬೇತಿಯ ಭಾಗವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸೇತುವೆಯೊಂದು ಕುಸಿದು ಅದರ ಮೇಲೆ ಓಡುತ್ತಿರುವ ರೈಲಿನ ಕೋಚ್ ಮೂರು ತುಂಡುಗಳಾಗಿ ನೀರಿಗೆ ಬೀಳುವಂತೆ ಅಣಕು ರೂಪ ತೋರಿಸಲಾಯಿತು.

“ಭಾರತೀಯ ರೈಲ್ವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಲ್ಟ್ರಾ ಥೆರಿಕ್ ಕಟಿಂಗ್ ಉಪಕರಣಗಳನ್ನು ತಯಾರಿಸಿದ ಅಮೆರಿಕ ಮೂಲದ ಬ್ರಾಕೊ ಮತ್ತು ಚಾಲಕರಿಗೆ ತರಬೇತಿ ನೀಡಿದ ಲೈಫ್ ಸೇವಿಂಗ್ ಸೊಸೈಟಿ ಆಫ್ ಇಂಡಿಯಾ ಮತ್ತು ಭಾರತೀಯ ರೈಲ್ವೆಯ 55 ಮಂದಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು NDRF ನಲ್ಲಿ ಸಹಾಯಕ ಕಮಾಂಡೆಂಟ್ ಮತ್ತು ನೋಡಲ್ ಅಧಿಕಾರಿ ಜೆ ಸೆಂಥಿಲ್ ಕುಮಾರ್ ಹೇಳಿದರು.

ಇದನ್ನೂ ಓದಿ: ಕಾಶ್ಮೀರ ಕಣಿವೆಗೆ ರೈಲು ಸಂಪರ್ಕ: ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಿಸಿದ ಭಾರತೀಯ ರೈಲ್ವೆ; ಯೋಜನೆಯ ಮಾಹಿತಿ ಇಲ್ಲಿದೆ…

ಬದುಕುಳಿದವರಿಗಾಗಿ ಹುಡುಕುತ್ತಿರುವಾಗ ಲೈಫ್ ಬೋಟ್‌ಗಳಲ್ಲಿನ ಡೈವರ್‌ಗಳು ಕೋಚ್‌ಗಳೊಳಗೆ ಸಿಲುಕಿದ್ದ ದೇಹಗಳನ್ನು ಹೊರತೆಗೆದರು. ನಂತರ, ತರಬೇತಿ ಪಡೆದ ಕಟ್ಟರ್‌ಗಳು ಮೃತದೇಹಗಳನ್ನು ಹೊರತೆಗೆಯಲು ರೈಲು ಕೋಚ್‌ನ ಒಂದು ಭಾಗವನ್ನು ಕತ್ತರಿಸಿದರು. ದಡದಲ್ಲಿರುವ ತಂಡವೊಂದು ಅವರೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿರುತ್ತದೆ ಎಂದು ನೋಡಲ್ ಅಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here