Home Uncategorized ನೀವು ಕುಡಿದರೆ, ನೀವು ಸಾಯುತ್ತೀರಿ;ಕಳ್ಳಭಟ್ಟಿ ದುರಂತ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯೆ

ನೀವು ಕುಡಿದರೆ, ನೀವು ಸಾಯುತ್ತೀರಿ;ಕಳ್ಳಭಟ್ಟಿ ದುರಂತ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯೆ

23
0

ಪಟನಾ: ಕಳ್ಳಭಟ್ಟಿ ದುರಂತದಲ್ಲಿ (hooch tragedy)ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವ ಸಾಧ್ಯತೆ ನಿರಾಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar), ರಾಜ್ಯ ಸರ್ಕಾರ 2016ರಲ್ಲಿಯೇ ಮದ್ಯ ನಿಷೇಧ ಮಾಡಿರುವಾಗ ಜನರು ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇತ್ತೀಚೆಗೆ ಸರಾನ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ ಸುಮಾರು 30ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಇದೀಗ ಮದ್ಯ ನಿಷೇಧ (Liquor Ban) ಅನುಷ್ಠಾನವನ್ನು ಸರ್ಕಾರ ಸರಿಯಾಗಿ ಮಾಡಿಲ್ಲ ಎಂದು ಬಿಜೆಪಿ, ಜೆಡಿಯು- ಆರ್ ಜೆಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.ಮದ್ಯ ದುರಂತದಲ್ಲಿ ಸಾವಿಗೀಡಾದವರಿಗೆ ಪರಿಹಾರ ನೀಡಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್, ಜೋ ಶರಾಬ್ ಪೀಯೇಗಾ ವೋ ತೋ ಮರೇಗಾ ಹೀ ನಾ, ಉದಾಹರಣ್ ಸಾಮ್ನೇ ಹೈ, ಪಿಯೋಗೇ ತೋ ಮರೋಗೆ ( ಮದ್ಯ ಕುಡಿದವನು ಸಾಯ್ತಾನೆ. ಉದಾಹರಣೆ ನಮ್ಮ ಮುಂದೆಯೇ ಇದೆ. ಕುಡಿದರೆ ಸಾಯ್ತೀರಿ) ಎಂದಿದ್ದಾರೆ. ಈ ವಾರದ ಆರಂಭದಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದಾಗ ಕೋಪಗೊಂಡ ನಿತೀಶ್ ಕುಮಾರ್, ನೀವೂ ಕುಡಿದಿದ್ದೀರಿ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು. ಮದ್ಯ ದುರಂತದಲ್ಲಿ ಮಡಿದವರ ಬಗ್ಗೆ ಸಂತಾಪ ವ್ಯಕ್ತ ಪಡಿಸಿದ ಕುಮಾರ್, ಜನರಲ್ಲಿ ಜಾಗೃತಿ ಮೂಡಿಸಬೇಕು. ನಾವು ಸಮಾಜದಲ್ಲಿ ಜಾಗೃತಿ ಉಂಟು ಮಾಡಲು ಅಭಿಯಾನಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇಲ್ಲಿ ಮದ್ಯ ನಿಷೇಧ ಇಲ್ಲದೇ ಇದ್ದಾಗಲೂ ಜನರು ವಿಷ ಮದ್ಯ ಸೇವಿಸಿ ಸಾವಿಗೀಡಾಗುತ್ತಿದ್ದರು. ಇತರ ರಾಜ್ಯಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಷ ಮದ್ಯ ಸೇವಿಸಿ ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಮದ್ಯ ನಿಷೇಧವಿರುವ ಗುಜರಾತಿನಲ್ಲಿಯೂ ಇಂಥದ್ದೇ ದುರಂತ ಸಂಭವಿಸಿದೆ. ಇತ್ತೀಚೆಗೆ ಪಂಜಾಬ್​​ನಲ್ಲಿಯೂ ಇದೇ ರೀತಿ ಸಂಭವಿಸಿತ್ತು. ಬಾಪು(ಮಹಾತ್ಮಗಾಂಧಿ) ಅವರು ನಿಷೇಧ ಪರವಾಗಿ ಹೇಳಿದ್ದೇನು? ವಿಶ್ವದಾದ್ಯಂತ ಅಧ್ಯಯನಹೇಳಿದ್ದೇನು ಎಂಬುದು ಗೊತ್ತೇ? ಮದ್ಯ ಕೆಟ್ಟದು, ಎಷ್ಟೊಂದು ಜನ ಇದರಿಂದ ಸಾಯುತ್ತಿದ್ದಾರೆ. ಹಲವಾರು ಮಂದಿ ಕಳ್ಳಭಟ್ಟಿ ಸೇವಿಸಿ ಸಾವಿಗೀಡಾಗುತ್ತಿದ್ದಾರೆ. ಇದು ದೇಶದಾದ್ಯಂತ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ನಾವು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದ್ದೇವೆ, ಆದರೆ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಷೇಧವಿರುವಾಗ, ಮಾರಾಟವಾಗುವ ಮದ್ಯದಲ್ಲಿ ನಿಸ್ಸಂಶಯವಾಗಿ ಏನಾದರೂ ವಿಷವಸ್ತು ಇದ್ದೇ ಇರುತ್ತದೆ ಎಂದು ಅವರು ಹೇಳಿದರು.

ಹಾಗೇ, ನೆನಪಿಡಿ, ನೀವು ಎಂದಿಗೂ  ಮದ್ಯ ಸೇವಿಸಬಾರದು. ಹೆಚ್ಚಿನ ಜನರು ನಿಷೇಧ ನೀತಿಯನ್ನು ಒಪ್ಪಿದ್ದಾರೆ. ಆದರೆ ಕೆಲವರು ತಪ್ಪು ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಾರ್ವಜನಿಕ ಸೇವಕನನ್ನು ಅಪರಾಧಿ ಎಂದು ನಿರ್ಣಯಿಸಲು ಲಂಚದ ಬೇಡಿಕೆಯ ನೇರ ಸಾಕ್ಷ್ಯ ಅಗತ್ಯವಿಲ್ಲ: ಸುಪ್ರೀಂಕೋರ್ಟ್

ಸಾವಿಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸುನೀಲ್ ಕುಮಾರ್ ಇದೇ ವೇಳೆ ಹೇಳಿದ್ದಾರೆ. ಬಿಹಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಪ್ರಸ್ತುತ ಮದ್ಯ ನಿಷೇಧವನ್ನು ಹೊಂದಿದೆ. ನಾಗಾಲ್ಯಾಂಡ್ ಮತ್ತು ಮಿಜೋರಾಂ ಕೆಲವು ವಿನಾಯಿತಿಗಳೊಂದಿಗೆ ಒಂದೇ ರೀತಿಯ ನೀತಿಗಳನ್ನು ಹೊಂದಿವೆ.

ದಶಕಗಳಿಂದ, ದಕ್ಷಿಣದಲ್ಲಿ ಕೇರಳ ಮತ್ತು ಉತ್ತರದಲ್ಲಿ ಹರಿಯಾಣದಂತಹ ರಾಜ್ಯಗಳು ನೀತಿಯನ್ನು ಜಾರಿ ಮಾಡಲು  ಪ್ರಯತ್ನಿಸಿದವು ಆದರೆ ಅನುಷ್ಠಾನವು ಕಷ್ಟಕರವಾದ ಕಾರಣ ಅದನ್ನು ಮಾಡಿಲ್ಲ.

ಮತ್ತಷ್ಟು ರಾಷ್ಚ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here