ಸುಳ್ಯ: ಕಾಲೇಜಿನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆಯ ನೆಟ್ಟಾರಿನಲ್ಲಿ ಸೋಮವಾರ ನಡೆದಿದೆ.
ನೆಟ್ಟಾರು ನವಗ್ರಾಮದ ಹುಕ್ರಪ್ಪ ಗೌಡ ಮತ್ತು ಜಯಂತಿ ದಂಪತಿಯ ಪುತ್ರ ಚರಣ್ (20) ಮನೆಯ ಹಿತ್ತಲಿನಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಾರೋಗ್ಯ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮೃತರಿಗೆ ತಂದೆ, ತಾಯಿ, ಸಹೋದರ ಇದ್ದಾರೆ. ಬೆಳ್ಳಾರೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.