Home Uncategorized ನೈಸ್ ಸಂಸ್ಥೆಯಿಂದ 554 ಎಕರೆ ಭೂಮಿ ವಾಪಸ್ಸು ಪಡೆಯುತ್ತೇವೆ: ಸಚಿವ ಶರಣಬಸಪ್ಪ

ನೈಸ್ ಸಂಸ್ಥೆಯಿಂದ 554 ಎಕರೆ ಭೂಮಿ ವಾಪಸ್ಸು ಪಡೆಯುತ್ತೇವೆ: ಸಚಿವ ಶರಣಬಸಪ್ಪ

24
0

ಬೆಳಗಾವಿ: ನೈಸ್ ಸಂಸ್ಥೆ ಬಳಿಯಲ್ಲಿ ಇರುವ 554 ಎಕರೆ ಹೆಚ್ಚುವರಿ ಜಮೀನನ್ನು ಶೀಘ್ರದಲ್ಲಿಯೇ ರಾಜ್ಯ ಸರಕಾರ ವಾಪಸ್ಸು ಪಡೆಯಲಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.

ಮಂಗಳವಾರ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ತುಳಸಿ ಮುನಿರಾಜು ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೈಸ್ ಸಂಸ್ಥೆ 554 ಎಕರೆ ಜಮೀನನ್ನು ವಾಪಸ್ಸು ಕೊಡಬೇಕಿದೆ. ಅವರು ಹೇಳುತ್ತಿರುವ ಸರ್ವೇ ನಂಬರ್ ಹಾಗೂ ದಾಖಲೆ ಇಟ್ಟಿರುವ ಸರ್ವೆ ನಂಬರ್ ಗೂ ವ್ಯತ್ಯಾಸ ಇದೆ. ಅವರಿಗೆ ಕೊಟ್ಟ ಜಾಗ ಅಂದರೆ ನಾವು ಸೂಚಿಸಿದ ಜಾಗ ವಾಪಸ್ಸು ನೀಡಬೇಕು. ಆದಷ್ಟು ಬೇಗ ನಾವು ಭೂಮಿ ವಶಕ್ಕೆ ಪಡೆಯಲಿದ್ದು, ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮುನಿರಾಜು ಗೌಡ, ನೈಸ್ ಕಂಪೆನಿಗೆ ಹೆಚ್ಚುವರಿ ನೀಡಿದ್ದ ಭೂಮಿಯನ್ನು ಇದುವರೆಗೆ ವಾಪಸ್ಸು ಪಡೆದಿಲ್ಲ. 554 ಎಕರೆ ಹೆಚ್ಚುವರಿ ಭೂಮಿ ನೀಡಿರುವ ಬಗ್ಗೆ ಸುಪ್ರಿಂಕೋರ್ಟ್‍ಗೆ ಸರಕಾರ ಈಗಾಗಲೇ ಅಫಿಡವಿಟ್ ಸಲ್ಲಿಸಿದೆ. ಆದರೆ ಒಂದೂವರೆ ವರ್ಷದಿಂದಲೂ ಹೆಚ್ಚುವರಿ ಜಮೀನು ವಾಪಸ್ ಪಡೆದಿಲ್ಲ. ಅಧಿಕಾರಿಗಳ ಬಳಿ ನಾವು ಕೇಳಿದ್ದಕ್ಕೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ ಎಂದರು.

LEAVE A REPLY

Please enter your comment!
Please enter your name here