Home Uncategorized ನೋಟಿಸ್​ ನೀಡಲು ಬಂದಿದ್ದ ಅಧಿಕಾರಿಗೆ ಮಚ್ಚು ತೋರಿಸಿದ್ದ ಕೇಸ್: ಕಾಂಗ್ರೆಸ್ ಮುಖಂಡ, ಆತನ ಪತ್ನಿ ಅರೆಸ್ಟ್​​

ನೋಟಿಸ್​ ನೀಡಲು ಬಂದಿದ್ದ ಅಧಿಕಾರಿಗೆ ಮಚ್ಚು ತೋರಿಸಿದ್ದ ಕೇಸ್: ಕಾಂಗ್ರೆಸ್ ಮುಖಂಡ, ಆತನ ಪತ್ನಿ ಅರೆಸ್ಟ್​​

48
0

ಮೈಸೂರು: ಡಿಪೋ ಅಧಿಕಾರಿ ಮೇಲೆ ಹಲ್ಲೆ (Assault) ನಡೆಸಲು ಮಹಿಳೆ ಮಚ್ಚು ಹಿಡಿದು ಬಂದಿರುವಂತಹ ಘಟನೆ ಜಿಲ್ಲೆಯ ಸಾತಗಳ್ಳಿ ಬಸ್ ಡಿಪೋನಲ್ಲಿ ಡಿ. 12ರಂದು ನಡೆದಿತ್ತು. ಸದ್ಯ ಈ ಕೇಸ್​​ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಫೀಕ್ ಅಹ್ಮದ್ ಹಾಗೂ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾಗಿ ನಗರದಲ್ಲಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗೆ ಮಚ್ಚು ತೋರಿಸಿದ್ದ ದಂಪತಿಯನ್ನು ಬಂಧಿಸಲಾಗಿದೆ. ಸಾತಗಳ್ಳಿ ಬಸ್ ಡಿಪೋ ಅಧಿಕಾರಿಗಳು ಡಿ.12ರಂದು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದರು. ಈ ವೇಳೆ ಮಚ್ಚು ತೋರಿಸಿ ಅಧಿಕಾರಿಗಳನ್ನು ದಂಪತಿ ಹೆದರಿಸಿದ್ದರು. 2017ರಲ್ಲಿ ಕಟ್ಟಡವನ್ನು 12 ವರ್ಷಗಳ ಅವಧಿಗೆ ಶಫೀಕ್ ಬಾಡಿಗೆ ಪಡೆದಿದ್ದ. ಎರಡು ವರ್ಷಗಳ ಕಾಲ ಶಫೀಕ್ ಅಹ್ಮದ್ ಕಟ್ಟಡದ ಬಾಡಿಗೆ ಕಟ್ಟಿಲ್ಲ.

ಕೊವಿಡ್ ಕಾರಣ ನೀಡಿ ನ್ಯಾಯಾಲಯದ ಮೂಲಕ ಸ್ಟೇ ತಂದಿದ್ದ. ಸ್ಟೇ ಅವಧಿ ಮುಗಿದ ನಂತರ ಕಟ್ಟಡ ಖಾಲಿ ಮಾಡಿಸಲು ಅಧಿಕಾರಿಗಳು ಹೋಗಿದ್ದರು. ಆದರೆ ಪೊಲೀಸರಿಗೆ ಮಾಹಿತಿ ನೀಡದೆ ಸಾರಿಗೆ ಅಧಿಕಾರಿಗಳು ಹೋಗಿದ್ದರು. ಡಿ.12ರಂದು ಘಟನೆ ಬಳಿಕ ಆರೋಪಿ ದಂಪತಿ ಪರಾರಿಯಾಗಿದ್ದರು. ನಿನ್ನೆ ಸಂಜೆ ವಿರಾಜಪೇಟೆ ಸಮೀಪ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಆರೋಪಿ ದಂಪತಿ ವಿರುದ್ಧ ರೌಡಿಶೀಟರ್ ಸಹ ತೆರೆಯಲಾಗಿದೆ ಎಂದು ರಮೇಶ್ ಬಾನೋತ್ ಮಾಹಿತಿ ನೀಡಿದರು.

ಇದನ್ನೂ ಓದಿ: ಮಗು ಬೇಕೆಂದವಳ ಕತೆ ಮುಗಿಸಿದ ಪಾತಕ ಪತಿ, ಪ್ರೀತಿಸಿ ಮದುವೆಯಾಗಿದ್ದವಳ ಜೊತೆ ಮನಸು ಮುರಿದುಕೊಂಡಿದ್ದ!

ಘಟನೆ ಹಿನ್ನೆಲೆ

ಡಿಪೋ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆ ಮಚ್ಚು ಹಿಡಿದು ಬಂದಿರುವಂತಹ ಘಟನೆ ನಗರದ ಸಾತಗಳ್ಳಿ ಬಸ್ ಡಿಪೋನಲ್ಲಿ ಘಟನೆ (ಡಿ.12) ನಡೆದಿದೆ. ಕಾಂಗ್ರೆಸ್ ಮುಖಂಡ ಶಫಿ ಪತ್ನಿಯಿಂದ ಕೃತ್ಯ ಆರೋಪ ಮಾಡಲಾಗಿದೆ. ಬಸ್ ಡಿಪೋ ಜಾಗವನ್ನು ಕಾಂಗ್ರೆಸ್​ ಮುಖಂಡ ಶಫಿ ಬಾಡಿಗೆಗೆ ಪಡೆದು ಕಾಲೇಜು ನಡೆಸುತ್ತಿದ್ದ. 1 ಕೋಟಿ 80 ಲಕ್ಷ ಬಾಡಿಗೆ ಬಾಕಿ ಆರೋಪ ಮಾಡಲಾಗಿದೆ. ಬಾಡಿಗೆ ಕಟ್ಟದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಡಿಪೋ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡು ಮಚ್ಚು ಹಿಡಿದು ಶಫಿ ಹಾಗೂ ಆತನ‌ ಪತ್ನಿ ಡಿಪೋಗೆ ಬಂದು, ಅಧಿಕಾರಿಗಳ ಮುಂದೆ ರಂಪಾಟ ಮಾಡಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ, ಕದ್ದ ಬಂಗಾರ ಖರೀದಿ ಆರೋಪ; ಅಟ್ಟಿಕಾ ಬಾಬು ಅರೆಸ್ಟ್

ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದಲ್ಲದೇ ಅಧಿಕಾರಿಗೆ ದಂಪತಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ದಂಪತಿಯ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ದಂಪತಿ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

LEAVE A REPLY

Please enter your comment!
Please enter your name here