ಚಿಕ್ಕಬಳ್ಳಾಪುರ: ಗಂಡ ಹೆಂಡರ ಜಗಳ ಉಂಡು ಮಲಗೋ ತನಕ ಅಂತಾರೆ ಆದ್ರೆ, ಇಲ್ಲೊಂದು ದಂಪತಿಯ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಇಂದು(ಡಿಸೆಂಬರ್ 03) ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದ್ದು, ಇದೀಗ ನಾಲ್ಕು ವರ್ಷದ ಮಗು ಮಗು ಅನಾಥರಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ಸುಮೈರಾ ಸುಲ್ತಾನ್(40) ಹಾಗೂ ಶಿಡ್ಲಘಟ್ಟ ಮೂಲದ ಮುನಿಕೃಷ್ಣ, ಇಂದು(ಶನಿವಾರ)) ನಗರದ ಗ್ರಂಥಲಾಯ ಮುಂದೆ ನಡು ರಸ್ತೆಯಲ್ಲಿ ಇಬ್ಬರು ಜಗಳ ಮಾಡಿಕೊಂಡು ನೂಕಾಟ ತಳ್ಳಾಟ ಮಾಡ್ತಿದ್ರು. ಆಗ ರಸ್ತೆಯಲ್ಲಿ ಲಾರಿಯೊಂದು ಬಂದಿದೆ. ಲಾರಿಯನ್ನು ನೋಡಿದ ಆಕೆಯ ಗಂಡ ಮುನಿಕೃಷ್ಣ, ಉದ್ದೇಶ ಪೂರ್ವಕವಾಗಿಯೆ ಸುಮೈರಾ ಸುಲ್ತಾನ್ ಳನ್ನು ಲಾರಿ ಕೆಳಗೆ ತಳ್ಳಿದ್ದಾನೆ. ಇದ್ರಿಂದ ಮಹಿಳೆ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ.
ಅಲ್ಲೇ ಪಕ್ಕದಲ್ಲಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ. ಇಬ್ಬರು ವಿವಾಹಿತರಾಗಿದ್ದು 8 ವರ್ಷಗಳ ಹಿಂದೆ ತಮ್ಮ ತಮ್ಮ ಸಂಸಾರ ಬಿಟ್ಟು ಪ್ರತ್ಯೇಕ ಮದುವೆಯಾಗಿ ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ರು. ದಂಪತಿಗೆ ಬಾಬಾಜಾನ್ ಅನ್ನೊ ನಾಲ್ಕು ವರ್ಷದ ಮಗುವಿದ್ದು ಈಗ ಮಗು ಅನಾಥರಾಗಿದೆ.
ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷರಾದ ರಂಗಸ್ವಾಮಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ