Home Uncategorized ಪರಭಾಷೆ ನಾಮಫಲಕ ಧ್ವಂಸ ಪ್ರಕರಣ: ಬಂಧಿತ ಕರವೇ ಕಾರ್ಯಕರ್ತರಿಗೆ ಜ.10ರವರೆಗೆ ನ್ಯಾಯಾಂಗ ಬಂಧನ

ಪರಭಾಷೆ ನಾಮಫಲಕ ಧ್ವಂಸ ಪ್ರಕರಣ: ಬಂಧಿತ ಕರವೇ ಕಾರ್ಯಕರ್ತರಿಗೆ ಜ.10ರವರೆಗೆ ನ್ಯಾಯಾಂಗ ಬಂಧನ

20
0

ಬೆಂಗಳೂರು, ಡಿ.28: ವಾಣಿಜ್ಯ ಮಳಿಗೆಗಳಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಮೆರವಣಿಗೆ ಹಾಗೂ ಕನ್ನಡೇತರ ಭಾಷೆಗಳ ನಾಮಫಲಕಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದ ಆರೋಪದಲ್ಲಿ ಬಂಧಿತ ಕರ್ನಾಟಕ ರಕ್ಷಣೆ ವೇದಿಕೆ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬುಧವಾರ ಮೆರವಣಿಗೆ ವೇಳೆ ರಸ್ತೆಯುದ್ದಕ್ಕೂ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿದ್ದ ನಾಮಫಲಕಗಳನ್ನು ಕರವೇ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಕೆಲವೆಡೆ ಕಲ್ಲು ತೂರಾಟ ಕೂಡಾ ನಡೆದಿತ್ತು. ಈ ವೇಳೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ 29 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ JMFC ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಬಂಧಿತ ಕರವೇ ಕಾರ್ಯಕರ್ತರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here