Home Uncategorized ಪರಿಹಾರ ನೀಡಿ, ಇಲ್ಲವೇ ಪಿಆರ್‌ಆರ್ ರದ್ದು ಮಾಡಿ: ಸರ್ಕಾರಕ್ಕೆ ರೈತರ ಆಗ್ರಹ

ಪರಿಹಾರ ನೀಡಿ, ಇಲ್ಲವೇ ಪಿಆರ್‌ಆರ್ ರದ್ದು ಮಾಡಿ: ಸರ್ಕಾರಕ್ಕೆ ರೈತರ ಆಗ್ರಹ

46
0

ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯಡಿ ಸ್ವಾಧೀನ ಪಡೆಯುವ ಭೂಮಿಗೂ 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಿ, ಇಲ್ಲವೇ ಯೋಜನೆಯನ್ನೇ ರದ್ದುಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
  ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯಡಿ ಸ್ವಾಧೀನ ಪಡೆಯುವ ಭೂಮಿಗೂ 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಪರಿಹಾರ ನೀಡಿ, ಇಲ್ಲವೇ ಯೋಜನೆಯನ್ನೇ ರದ್ದುಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.

ನಿನ್ನೆಯಷ್ಟೇ ಯೋಜನೆ ವಿರುದ್ಧ ಅರಮನೆ ಗೂಟಹಳ್ಳಿಯಲ್ಲಿರುವ ಬಿಡಿಎ ಕೇಂದ್ರ ಕಚೇರಿ ಎದುರು ಪ್ರತಿಭಟನೆ ರೈತರು ಪ್ರತಿಭಟನೆ ನಡೆಸಿದರು.

ಈ ವೇಳೆ ಮುಖ್ಯಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಲು ಕೆಲವರಿಗೆ ಅವಕಾಶ ನೀಡಲಾಯಿತು. ಈ ವೇಳೆ ರೈತ ಮುಖಂಡರು ಜಮೀನುಗಳಿಗೆ ಉತ್ತಮ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು.

ಮುಖ್ಯಮಂತ್ರಿಗಳನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರ ನಿವಾಸದಲ್ಲಿ ಭೇಟಿ ಮಾಡಲು ಅವಕಾಶ ನೀಡಲಾಯಿತು ಎಂದು ಪಿಆರ್‌ಆರ್ ರೈತರು ಮತ್ತು ಭೂಮಾಲೀಕರ ಸಂಘ’ದ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಎನ್ ರಘು ಅವರು ಹೇಳಿದರು.

ಭೂಸ್ವಾಧೀನ ಕಾಯಿದೆ 2013ರ ಪ್ರಕಾರ ಪರಿಹಾರ ನೀಡಿದ್ದೇ ಆದರೆ, ರೈತರಿಗೆ ಬಿಡಿಎ ನೀಡುವ ಯೋಜನೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ಸಿಗಲಿದೆ. ಯೋಜನೆ ರೂಪಿಸಿ 18 ವರ್ಷಗಳಾಗಿವೆ. ಹಳೆಯ ದರವನ್ನೇ ಇಟ್ಟುಕೊಂಡು ಪರಿಹಾರ ನೀಡಲು ಮುಂದಾಗುವುದು ಸರಿಯಲ್ಲ. ಹೀಗಾಗಿ ಯೋಜನೆ ರದ್ದುಗೊಳಿಸುವುದು ಉತ್ತಮ ಎಂದು ತಿಳಿಸಿದರು.

ಇತ್ತೀಚಿನ ರಾಜ್ಯ ಬಜೆಟ್‌ನಲ್ಲಿ ಸರ್ಕಾರವು ಪಿಆರ್‌ಆರ್ ಯೋಜನೆಯನ್ನು ಜಾರಿ ಕುರಿತು ಘೋಷಣೆ ಮಾಡಿತು. ಆದರೆ, ಯೋಜನಗೆ ಅನುದಾನವನ್ನು ಮೀಸಲಿಟ್ಟಿಲ್ಲ ಎಂದರು.

“2013 ರ ಕಾಯಿದೆಯಂತೆ ಪರಿಹಾರ ನೀಡಿದರೆ, ಎಲೆಕ್ಟ್ರಾನಿಕ್ಸ್ ಸಿಟಿ ಬಳಿ ಇರುವ ನನ್ನ 2.1 ಎಕರೆ ಜಮೀನಿಗೆ 20 ಕೋಟಿ ರೂ ಸಿಗಲಿದೆ. ಆದರೆ, ಹಳೆಯ ಕಾಯಿದೆಯನ್ನು ಅನುಸರಿಸಿದರೆ ಕೇವಲ 4 ಕೋಟಿ ರೂ ಸಿಲಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here