Home ಕರ್ನಾಟಕ ಪಿಟಿಐ ಪತ್ರಕರ್ತೆಯ ಮೇಲಿನ ಹಲ್ಲೆ ಪ್ರಕರಣ | ವರದಿಗಾರನನ್ನು ಅಮಾನತು ಮಾಡಿದ ಎ ಎನ್ ಐ

ಪಿಟಿಐ ಪತ್ರಕರ್ತೆಯ ಮೇಲಿನ ಹಲ್ಲೆ ಪ್ರಕರಣ | ವರದಿಗಾರನನ್ನು ಅಮಾನತು ಮಾಡಿದ ಎ ಎನ್ ಐ

13
0

ಬೆಂಗಳೂರು : ಪಿಟಿಐ ಪತ್ರಕರ್ತೆಯ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವರದಿಗಾರನನ್ನು ಅಮಾನತು ಮಾಡಿರುವುದಾಗಿ ಎ ಎನ್ ಐ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಕುರಿತು ಎಕ್ಸ್ ಪೋಸ್ಟ್ ಹಂಚಿಕೊಂಡಿರುವ ANI ಪತ್ರಕರ್ತ ನವೀನ್ ಕಪೂರ್, “ANI ವರದಿ ಮಾಡುವ ಸಂದರ್ಭ ಪತ್ರಕರ್ತರಿಂದ ಹಿಂಸೆಯನ್ನು ಯಾವುದೇ ರೀತಿಯಲ್ಲಿ ಕ್ಷಮಿಸುವುದಿಲ್ಲ ಅಥವಾ ಅದಕ್ಕೆ ಸಹಮತ ವ್ಯಕ್ತಪಡಿಸುವುದಿಲ್ಲ. ನಮ್ಮ ವರದಿಗಾರರು ನಮಗೆ ಹೇಳುವ ಪ್ರಕಾರ PTI ಪತ್ರಕರ್ತೆ ಮೊದಲು ದಾಳಿಯನ್ನು ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಮೇಲಿನ ಅಪ್ರಚೋದಿತ ದಾಳಿಗೆ ಸಂಬಂಧಿಸಿದಂತೆ ನಮ್ಮ ವರದಿಗಾರರು ಎಫ್ ಐ ಆರ್ ಮಾಡಿಸುತ್ತಿದ್ದಾರೆ. ಕಾನೂನು ಪ್ರಕ್ರಿಯೆಯು ಸಂಪೂರ್ಣ ಸತ್ಯಗಳನ್ನು ಬಹಿರಂಗಪಡಿಸುತ್ತದೆ ಎಂದು ನಾವು ನಂಬುತ್ತೇವೆ. ತನಿಖಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಎಎನ್ಐ ವರದಿಗಾರರನ್ನು ಅಮಾನತುಗೊಳಿಸಲಾಗಿದೆ. (ಕೆಳಗಿನ ಫೋಟೋಗಳನ್ನು ಎಎನ್ಐ ವರದಿಗಾರರು ತಮ್ಮ ಮೇಲಿನ ಹಲ್ಲೆಯ ಆಧಾರದ ಮೇಲೆ ಹಂಚಿಕೊಂಡಿದ್ದಾರೆ)” ಎಂದು ಪೋಸ್ಟ್ ಮಾಡಿದ್ದಾರೆ.

ANI does not in any manner condone or approve of violence by journalists in the field. This post is selective and seeks to supress the first attack by the PTI journalist as per what our reporter tells us. Our reporter is also filing a First Information Report in relation to the… https://t.co/nAMEgtRgPx pic.twitter.com/uGCDJBPbZL

— Naveen Kapoor (@IamNaveenKapoor) March 28, 2024

LEAVE A REPLY

Please enter your comment!
Please enter your name here