Home Uncategorized ಪುಟ್ಟ ಬಾಲಕಿಯ ಚಿತ್ರದ ಸ್ಥಾನದಲ್ಲಿ ಈ ಇನ್‌ಸ್ಟಾಗ್ರಾಂ ಸ್ಟಾರ್ ಚಿತ್ರ ಹಾಕಿದ ಪಾರ್ಲೆ-ಜಿ: ಕಾರಣವೇನು ಗೊತ್ತೇ?

ಪುಟ್ಟ ಬಾಲಕಿಯ ಚಿತ್ರದ ಸ್ಥಾನದಲ್ಲಿ ಈ ಇನ್‌ಸ್ಟಾಗ್ರಾಂ ಸ್ಟಾರ್ ಚಿತ್ರ ಹಾಕಿದ ಪಾರ್ಲೆ-ಜಿ: ಕಾರಣವೇನು ಗೊತ್ತೇ?

30
0

ಹೊಸದಿಲ್ಲಿ: ಖ್ಯಾತ ಬಿಸ್ಕತ್ತು ತಯಾರಿಕಾ ಸಂಸ್ಥೆ ಪಾರ್ಲೆ, ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ತನ್ನ ಜನಪ್ರಿಯ ಪಾರ್ಲೆ-ಜಿ ಬಿಸ್ಕತ್ತು ಪ್ಯಾಕೆಟ್‌ ಮೇಲೆ ಇದ್ದ ಪುಟ್ಟ ಬಾಲಕಿಯ ಚಿತ್ರದ ಸ್ಥಾನದಲ್ಲಿ ಇನ್‌ಸ್ಟಾಗ್ರಾಂ ಸ್ಟಾರ್ ಝೆರ್ವಾನ್‌ ಜೆ ಬನ್‌ಶಾಹ್‌ ಅವರ ಚಿತ್ರ ಹಾಕಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

“ನೀವು ಪಾರ್ಲೆ ಮಾಲಕರನ್ನು ಭೇಟಿಯಾದರೆ ಅವರನ್ನು ಪಾರ್ಲೆ ಸರ್‌, ಮಿಸ್ಟರ್‌ ಪಾರ್ಲೆ ಅಥವಾ ಪಾರ್ಲೆ ಜಿ ಅನ್ನುವಿರಾ?” ಎಂಬ ಪ್ರಶ್ನೆಯನ್ನು ಝೆರ್ವಾನ್‌ ಈ ಹಿಂದೆ ತಮ್ಮ ಫಾಲೋವರ್ಸ್‌ ಬಳಿ ವೀಡಿಯೋ ಕ್ಲಿಪ್‌ ಶೇರ್‌ ಮಾಡುವ ಮೂಲಕ ಕೇಳಿದ್ದರು. ಈ ವೀಡಿಯೋದಲ್ಲಿ ಅವರು ಕಾರಿನಲ್ಲಿ ಗೊಂದಲಮಯ ಮುಖದೊಂದಿಗೆ ಕುಳಿತಿರುವುದು ಕಾಣಿಸುತ್ತದೆ ಹಾಗೂ ಹಿನ್ನೆಲೆಯಲ್ಲಿ ಅನಿಲ್‌ ಕಪೂರ್‌ ಅವರ ರಾಮ್‌ ಲಖನ್‌ ಸಿನೆಮಾದ “ಏ ಜೀ ಓ ಜೀ” ಹಾಡು ಕೇಳಿಸುತ್ತದೆ ಮತ್ತು ಮೇಲಿನ ಪ್ರಶ್ನೆಯ ಶೀರ್ಷಿಕೆ ಕಾಣಿಸುತ್ತದೆ.

ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿನ ಅವರ ಫಾಲೋವರ್ಸ್‌ ಸ್ವಾರಸ್ಯಕರ ಪ್ರತಿಕ್ರಿಯೆಗಳನ್ನು ನೀಡಿದ್ದರೆ ಈ ಪೋಸ್ಟ್‌ ಪಾರ್ಲೆ ಜಿ ಕಂಪೆನಿಯನ್ನೂ ಆಕರ್ಷಿಸಿತ್ತು. ಕಂಪನಿಯ ಅಧಿಕೃತ ಖಾತೆ ಪೋಸ್ಟ್‌ ಮಾಡಿ “ಬನ್‌ಶಾಹ್‌ ಜೀ, ನೀವು ನಮ್ಮನ್ನು ಒಜಿ ಅನ್ನಬಹುದು,” ಎಂದು ಉತ್ತರಿಸಿದೆ.

ನಂತರ ಪಾರ್ಲೆ-ಜಿ ತನ್ನ ಬಿಸ್ಕತ್ತು ರ‍್ಯಾಪರ್‌ನಲ್ಲಿನ ಪುಟ್ಟ ಬಾಲಕಿಯ ಚಿತ್ರದ ಸ್ಥಾನದಲ್ಲಿ ಬನ್‌ಶಾಹ್‌ ಅವರ ಚಿತ್ರವನ್ನು ಹಾಕಿರುವ ಒಂದು ಚಿತ್ರವನ್ನು ಪೋಸ್ಟ್‌ ಮಾಡಿದೆ “ಪಾರ್ಲೆ-ಜಿ ಮಾಲಕರನ್ನು ಹೇಗೆಂದು ಕರೆಯಬೇಕೆಂದು ನೀವು ಯೋಚಿಸುತ್ತಿದ್ದರೆ ಒಂದು ಕಪ್‌ ಚಹಾದೊಂದಿಗೆ ಆಸ್ವಾದಿಸಲು ನಿಮ್ಮ ಅಚ್ಚುಮೆಚ್ಚಿನ ಬಿಸ್ಕತ್ತು ಅನ್ನಬಹುದು. ಏನು ಹೇಳುವಿರಿ ಬನ್‌ಶಾಹ್‌ ಜೀ,” ಎಂಬ ಪೋಸ್ಟ್‌ ಅನ್ನೂ ಹಾಕಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬನ್‌ಶಾಹ್‌ ಚಿಕ್ಕಂದಿನಲ್ಲಿ ಪಾರ್ಲೆ-ಜಿ ತಮ್ಮ ಅಚ್ಚುಮೆಚ್ಚಿನ ಬಿಸ್ಕತ್ತು ಆಗಿದ್ದನ್ನು ಸ್ಮರಿಸಿದರು. “ಸೀಸನ್ಸ್‌ ಗ್ರೀಟಿಂಗ್ಸ್.‌ ಪಾರ್ಲೆ-ಜಿ ನನ್ನ ಅಚ್ಚುಮೆಚ್ಚಿನದದ್ದಾಗಿತ್ತು, ಯಾವುದೇ ಟ್ರಿಪ್‌, ಪಾರ್ಟಿ, ಔತಣಕೂಟದಲ್ಲೂ ಹಾಗೂ ಹಸಿವಾದಾಗ ಅದೇ ಬೇಕಿತ್ತು. ಕೇಕಿನಲ್ಲೂ ಅದು ಇರುತ್ತಿತ್ತು. ನಾನು ಜಾಣನಾಗುತ್ತೇನೆಂದು ಅಂದುಕೊಂಡೇ ಬಿಸ್ಕತ್ತು ತಿನ್ನುತ್ತಿದ್ದೆ” ಎಂದು ಬರೆದಿದ್ಧಾರೆ,

LEAVE A REPLY

Please enter your comment!
Please enter your name here