Home Uncategorized ಪುತ್ತಿಗೆ ಶ್ರೀಗಳ ಕುರಿತ ‘ಸಪ್ತಸಾಗರದಾಚೆ’ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

ಪುತ್ತಿಗೆ ಶ್ರೀಗಳ ಕುರಿತ ‘ಸಪ್ತಸಾಗರದಾಚೆ’ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

26
0

ಉಡುಪಿ, ಜ.19: ಪರ್ಯಾಯ ಪುತ್ತಿಗೆ ಮಠ ಮತ್ತು ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಚತುರ್ಥ ವಿಶ್ವ ಗೀತಾ ಪರ್ಯಾಯದ ಅಂಗವಾಗಿ ಸಪ್ತ ಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ ಛಾಯಾಚಿತ್ರ ಪ್ರದರ್ಶನ ವನ್ನು ಜಪಾನಿನ ರಿಸ್ಸೋ ಕೊಸೈ ಕೋಯ್ ಸಂಸ್ಥೆಯ ನಿಯೋಜಿತ ಅಧ್ಯಕ್ಷೆ ರೆ.ಕೋಶೊ ನಿವಾನೋ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಉದ್ಘಾಟಿಸಿದರು.

ಆಸ್ಟ್ರೇಲಿಯಾ ವಿಕ್ಟೋರಿಯಾದ ಮಾಜಿ ಸಚಿವ ಲ್ಯೂಕ್ ಡನೆಲನ್, ಮಣಿಪಾಲ ಮೀಡಿಯ ನೆಟ್‌ವರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ಅಧ್ಯಕ್ಷ ಸತೀಶ್ ಯು.ಪೈ, ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಎಸ್.ಪೈ, ಮಾಜಿ ಸಚಿವರಾದ ಬಸನಗೌಡ ಯತ್ನಾಳ್, ಗಾಲಿ ಜನಾರ್ದನ್ ರೆಡ್ಡಿ, ಮಾಜಿ ಶಾಸಕ ರಘುಪತಿ ಭಟ್, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಂಜನ್ ಕಲ್ಕೂರ, ಉಡುಪ ರತ್ನ ಪ್ರತಿಷ್ಠಾನದ ವಿಶ್ವಸ್ಥ ಜನಾರ್ದನ ಕೊಡವೂರ್ ಮೊದಲಾದವರು ಉಪಸ್ಥಿತರಿದ್ದರು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಹಾಗೂ ಕಿರಿಯ ಯತಿ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು. ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮೋಹನ ಉಡುಪ ವಂದಿಸಿದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ನಿರ್ವಹಿಸಿದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಕುರಿತು ನಿರ್ಮಿಸಿದ ಛಾಯಾ ಚಿತ್ರಗಳನ್ನು ಇಲ್ಲಿ ಪ್ರಸ್ತುತ ಪಡಸಲಾಗಿದೆ. ಫಿನಿಕ್ಸ್ ವೆಂಕಟ ಕೃಷ್ಣ ದೇವಸ್ಥಾನದಲ್ಲಿ ಯತಿಗಳ ನಿತ್ಯ ಪೂಜೆಯನ್ನು ಇಲ್ಲಿ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯ ಲಾಗಿದ್ದು ಒಟ್ಟು 36 ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಜ.24ರವರೆಗೆ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here