Home Uncategorized ಪೋರ್ಚುಗಲ್, ಬ್ರೆಜಿಲ್ ಕಣಕ್ಕೆ; ಇಂದು 8 ತಂಡಗಳ ನಡುವೆ ಫುಟ್ಬಾಲ್ ಕದನ..! ಇಲ್ಲಿದೆ ಪೂರ್ಣ ವಿವರ

ಪೋರ್ಚುಗಲ್, ಬ್ರೆಜಿಲ್ ಕಣಕ್ಕೆ; ಇಂದು 8 ತಂಡಗಳ ನಡುವೆ ಫುಟ್ಬಾಲ್ ಕದನ..! ಇಲ್ಲಿದೆ ಪೂರ್ಣ ವಿವರ

46
0

ಇಂದು ಮತ್ತೊಮ್ಮೆ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಫಿಫಾ ವಿಶ್ವಕಪ್​ನಲ್ಲಿ (FIFA World Cup 2022) ಮೈದಾನಕ್ಕಿಳಿಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಗೆದ್ದರೆ ಪೋರ್ಚುಗಲ್‌ (Portugal) ತಂಡ 16ರ ಘಟ್ಟಕ್ಕೆ ಟಿಕೆಟ್ ಖಾತ್ರಿಪಡಿಸಿಕೊಳ್ಳಲ್ಲಿದೆ. ಆಡಿದ ಮೊದಲ ಪಂದ್ಯದಲ್ಲಿ ಪೋರ್ಚುಗಲ್‌ 3-2 ಗೋಲುಗಳಿಂದ ಗೆಲುವು ಸಾಧಿಸಿತ್ತು. ಈ ವಿಜಯದ ನಂತರ ತಂಡದ ನಾಯಕ ರೊನಾಲ್ಡೊ ತನ್ನ ಸ್ವಂತ ಖರ್ಚಿನಲ್ಲಿ ಇಡೀ ತಂಡಕ್ಕೆ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಪಾರ್ಟಿ ನೀಡಿದ್ದರು. ಈಗ ಅದೇ ಒಗ್ಗಟ್ಟಿನಿಂದ ಈ ತಂಡ ಕೊನೆಯ 16ರ ಘಟಕ್ಕೆ ಎಂಟ್ರಿಕೊಡಲು ಹೋರಾಡಲಿದೆ. ಪೋರ್ಚುಗಲ್​ನಂತೆ ಬ್ರೆಜಿಲ್ ತಂಡಕ್ಕೂ ಇದೇ ಅವಕಾಶವಿದೆ. ಆದರೆ, ಬ್ರೆಜಿಲ್ ತಂಡಕ್ಕೆ ಪಂದ್ಯಕ್ಕೂ ಮುನ್ನ ಹಿನ್ನಡೆಯುಂಟಾಗಿದ್ದು, ಈ ಪಂದ್ಯಕ್ಕೆ ತಂಡದ ಸೂಪರ್ ಸ್ಟಾರ್ ಆಟಗಾರ ನೇಮರ್ (Neymar) ಅಲಭ್ಯರಾಗಲಿದ್ದಾರೆ.

ಬ್ರೆಜಿಲ್ ಮತ್ತು ಪೋರ್ಚುಗಲ್ ಹೊರತುಪಡಿಸಿ, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಕ್ಯಾಮರೂನ್, ದಕ್ಷಿಣ ಕೊರಿಯಾ, ಘಾನಾ ಮತ್ತು ಉರುಗ್ವೆ ತಂಡಗಳು ಇಂದಿನ ಫಿಫಾ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿವೆ. ಈ ಎಲ್ಲಾ ತಂಡಗಳಿಗೆ ಟೂರ್ನಿಯಲ್ಲಿ ಇದು ಎರಡನೇ ಪಂದ್ಯವಾಗಿದೆ.

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ

ಫಿಫಾ ವಿಶ್ವಕಪ್​ನಲ್ಲಿ ಇಂದ ಯಾವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ?

ಫಿಫಾ ವಿಶ್ವಕಪ್‌ನಲ್ಲಿ ಸೋಮವಾರ 4 ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯ ಕ್ಯಾಮರೂನ್ ಮತ್ತು ಸರ್ಬಿಯಾ ನಡುವೆ, ಎರಡನೇ ಪಂದ್ಯ ದಕ್ಷಿಣ ಕೊರಿಯಾ ವಿರುದ್ಧ ಘಾನಾ ನಡುವೆ, ಮೂರನೇ ಪಂದ್ಯ ಬ್ರೆಜಿಲ್ ಮತ್ತು ಸ್ವಿಟ್ಜರ್ಲೆಂಡ್ ನಡುವೆ ನಡೆಯಲಿದೆ. ಹಾಗೆಯೇ ಕೊನೆಯ ಪಂದ್ಯ ತಡರಾತ್ರಿ ಪೋರ್ಚುಗಲ್ ಮತ್ತು ಉರುಗ್ವೆ ನಡುವೆ ನಡೆಯಲಿದೆ.

ಇಂದಿನ ಎಲ್ಲಾ ನಾಲ್ಕು ಪಂದ್ಯಗಳನ್ನು ಯಾವಾಗ ಆಡಲಾಗುತ್ತದೆ?

ಕ್ಯಾಮರೂನ್ ಮತ್ತು ಸರ್ಬಿಯಾ ನಡುವಿನ ಫಿಫಾ ವಿಶ್ವಕಪ್ ಪಂದ್ಯವು ಸೋಮವಾರ, ನವೆಂಬರ್ 28 ರಂದು ನಡೆಯಲಿದೆ. ಅದೇ ದಿನ ದಕ್ಷಿಣ ಕೊರಿಯಾ ವಿರುದ್ಧ ಘಾನಾ ಮತ್ತು ಬ್ರೆಜಿಲ್ ವಿರುದ್ಧ ಸ್ವಿಟ್ಜರ್ಲೆಂಡ್ ನಡುವೆ ಪಂದ್ಯಗಳು ನಡೆಯಲಿವೆ. ಇದಲ್ಲದೆ, ನಾಲ್ಕನೇ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 29 ರಂದು ನಡೆಯಲಿದೆ.

ನಾಲ್ಕು ಪಂದ್ಯಗಳು ಯಾವ ಸಮಯದಲ್ಲಿ ಪ್ರಾರಂಭವಾಗುತ್ತವೆ?

ಭಾರತೀಯ ಕಾಲಮಾನದ ಪ್ರಕಾರ ಕ್ಯಾಮರೂನ್ ಮತ್ತು ಸರ್ಬಿಯಾ ನಡುವಿನ ಪಂದ್ಯ ಮಧ್ಯಾಹ್ನ 03:30 ಕ್ಕೆ ಆರಂಭವಾಗಲಿದೆ. ಇದಲ್ಲದೇ ದಕ್ಷಿಣ ಕೊರಿಯಾ ಹಾಗೂ ಘಾನಾ ನಡುವಿನ ಪಂದ್ಯ ಸಂಜೆ 6.30ರಿಂದ ಆರಂಭವಾದರೆ, ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಪಂದ್ಯ ರಾತ್ರಿ 9.30ರಿಂದ ಆರಂಭವಾಗಲಿದೆ. ಬಳಿಕ ಪೋರ್ಚುಗಲ್ ಮತ್ತು ಉರುಗ್ವೆ ನಡುವಿನ ಪಂದ್ಯ ತಡರಾತ್ರಿ 12.30 ಕ್ಕೆ ಆರಂಭವಾಗಲಿವೆ.

ಎಲ್ಲಾ ನಾಲ್ಕು ಪಂದ್ಯಗಳ ಯಾವ ಚಾನೆಲ್​ನಲ್ಲಿ ಲೈವ್ ಟೆಲಿಕಾಸ್ಟ್ ಆಗಲಿವೆ?

ಫಿಫಾ ವಿಶ್ವಕಪ್‌ನಲ್ಲಿ ಇಂದು ನಡೆಯುವ ನಾಲ್ಕು ಪಂದ್ಯಗಳ ನೇರ ಪ್ರಸಾರವನ್ನು Sports18 ಮತ್ತು Sports18 HD ಯಲ್ಲಿ ವೀಕ್ಷಿಸಬಹುದಾಗಿದೆ.

ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ನೋಡಬಹುದಾಗಿದೆ.

LEAVE A REPLY

Please enter your comment!
Please enter your name here