ಮಾಜಿ ನೀಲಿ ತಾರೆ ಮಿಯಾ ಖಲೀಫಾ (Mia Khalifa) ಇಸ್ರೇಲ್ (Israel) ವಿರುದ್ಧ ಸರಣಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಪ್ಯಾಲೆಸ್ತೀನ್ (Palestine) ಪರವಾಗಿ ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ತಾವು ಪ್ಯಾಲೆಸ್ತೀನ್ ಪರವಾಗಿ ನಿಂತಿರುವುದಾಗಿ ಅವರು ತಿಳಿಸಿದ್ದಾರೆ.
ಇಸ್ರೇಲ್ ನ ಮೇಲೆ ಹಮಾಸ್ ದೊಡ್ಡ ಮಟ್ಟದಲ್ಲಿ ದಾಳಿ ಮಾಡಿದೆ. ಲೆಬನಾನ್ ಮೂಲದ ಈ ತಾರೆ ಪ್ಯಾಲೆಸ್ತೀನ್ ಪರವಾಗಿ ನಿಂತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಮಿಯಾ ಅವರನ್ನು ಕೆಲಸದಿಂದಲೂ ವಜಾ ಮಾಡಲಾಗಿದೆ. ಸದ್ಯ ಮಿಯಾ ಅಮೆರಿಕಾದಲ್ಲಿ ವಾಸವಿದ್ದು, ಅಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಇಸ್ರೇಲ್ ಕುತಂತ್ರಗಳ ಬಗ್ಗೆಯೂ ಅವರು ಮಾತನಾಡಿದ್ದು, ಇತಿಹಾಸವನ್ನು ನೆನಪಿಸುವಂತಹ ಬರಹಗಳನ್ನು ಮಿಯಾ ಖಲೀಫಾ ಪೋಸ್ಟ್ ಮಾಡಿದ್ದಾರೆ. ಪ್ಯಾಲೆಸ್ತೀನ್ ಪರವಾಗಿ ತಾವು ನಿಲ್ಲಲು ಕಾರಣವನ್ನೂ ಅವರು ನೀಡಿದ್ದಾರೆ. ಮಿಯಾ ಪೋಸ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದೆ.
The post ಪ್ಯಾಲೆಸ್ತೀನ್ ಪರ ಮಾಜಿ ನೀಲಿ ತಾರೆ ಬ್ಯಾಟಿಂಗ್: ಮಿಯಾ ಖಲೀಫಾ ಕೆಲಸದಿಂದಲೂ ವಜಾ ! appeared first on Ain Live News.