Home Uncategorized ಪ್ರತ್ಯೇಕ ಘಟನೆ: ಇಬ್ಬರು ವೃದ್ಧರ ಆತ್ಮಹತ್ಯೆ

ಪ್ರತ್ಯೇಕ ಘಟನೆ: ಇಬ್ಬರು ವೃದ್ಧರ ಆತ್ಮಹತ್ಯೆ

29
0

ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡ ವೃದ್ಧರೊಬ್ಬರು 76 ಬಡಗುಬೆಟ್ಟು ಗ್ರಾಮದ ಬೈಲೂರಿನ ತಮ್ಮ ವಾಸದ ಮನೆಯಲ್ಲಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಅಪರಾಹ್ನದ ವೇಳೆ ನಡೆದ ಬಗ್ಗೆ ವರದಿಯಾಗಿದೆ.

ಲಿಂಗಪ್ಪ (79) ಎಂಬವರೇ ಮೃತವ್ಯಕ್ತಿ. ಇವರು ಯಾವುದೋ ಸಮಸ್ಯೆಯಿಂದ ಮನೆಯ ಅಡುಗೆ ಕೋಣೆಯ ಮಾಡಿಗೆ ಲುಂಗಿ ಕಟ್ಟಿ, ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕಳೆದೆರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಕುಂಭಾಶಿ ಗ್ರಾಮದ ವಿ.ಮಂಜುನಾಥ ಎಂಬವರ ಪತ್ನಿ ಸೀತಾರತ್ನ (63), ತನಗಿದ್ದ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ರಾತ್ರಿ 11ರಿಂದ ಇಂದು ಬೆಳಗಿನ ಜಾವ 6ಗಂಟೆ ನಡುವಿನ ಅವಧಿಯಲ್ಲಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here