Home Uncategorized ಪ್ರೀತಿಗೆ ಪೋಷಕರೇ ವಿಲನ್…! ಅಮ್ಮನಿಗೇ ವಾಟ್ಸಪ್ಪ್ ಲೊಕೇಷನ್ಸ್ ಕಳ್ಸಿ ತಮಿಳುನಾಡಿನಲ್ಲಿ ಆತ್ಮಹತ್ಯೆ

ಪ್ರೀತಿಗೆ ಪೋಷಕರೇ ವಿಲನ್…! ಅಮ್ಮನಿಗೇ ವಾಟ್ಸಪ್ಪ್ ಲೊಕೇಷನ್ಸ್ ಕಳ್ಸಿ ತಮಿಳುನಾಡಿನಲ್ಲಿ ಆತ್ಮಹತ್ಯೆ

28
0

ಬೆಂಗಳೂರು: ಅವರಿಬ್ಬರದ್ದು ಮುದ್ದಾದ ಜೋಡಿ.ಕಾಲೇಜಿನಲ್ಲಿ ಓದುವಾಗ ಪ್ರೇಮಾಂಕು ರವಾಗಿತ್ತು.ತಾಯಿ ಇಲ್ಲದ ಆಕೆಯನ್ನ ತಾಯಿಗಿಂತ ಹೆಚ್ಚಾದ ಪ್ರೀತಿ ಕೊಟ್ಟು ನೋಡ್ಕೊಂಡಿದಾ .ಆದ್ರೆ ಇವರ ಪ್ರೀತಿಗೆ ಯುವತಿ ಕುಟುಂಬಸ್ಥರೇ ವಿಲನ್ ಆಗಿಬಿಟ್ಟಿದ್ರು.ಯುವಕನ ಇಡೀ ದೇಹವೇ ಛಿದ್ರ ಛಿದ್ರ ಆಗುವಂತೆ ದುರಂತ ಅಂತ್ಯ ಕಂಡಿದೇ .ಮನೆಯವರಿಂದ ದೂರ ಆಗಿರೊ ಯುವತಿ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾಳೆ.ಆ ನೊಂದ ಪ್ರೀತಿಯ ಕಥೆಯನ್ನೇ ತೋರಿಸ್ತೀವಿ ನೋಡಿ..

ಐಶ್ವರ್ಯ ಒಂದೂವರೆ ವರ್ಷದ ಮಗು ಇದ್ದಾಗಲೇ ತಾಯಿ ಕಳೆದುಕೊಂಡಿದ್ಳು.ತಂದೆ ಮತ್ತೊಂದು ಮದುವೆ ಆಗಿದ್ದ.ಆದ್ರೆ ಮಲತಾಯಿ ತಾಯಿಯ ಪ್ರೀತಿ ಕೊಡೋಕೆ ಸಾಧ್ಯನಾ ಹೇಳಿ..ಇನ್ನಿಲ್ಲದ ಹಿಂಸೆ ಕೊಡೋಕೆ ಶುರು ಮಾಡಿದ್ಳು ಹಾಗಾಗಿ ಐಶ್ವರ್ಯ ತನ್ನ ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ಳು.ಇದೆಲ್ಲ ಕಳೆದು ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿಕೊಂಡಿದ್ಳು.ಅಲ್ಲಿ ಪರಿಚಯವಾಗಿದ್ದೇ ಈ ಮಣಿಕಂಠ.ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ.ಒಟ್ಟಿಗೆ ಬದುಕೊ‌ ನಿರ್ಧಾರ ಮಾಡಿದ್ರು‌‌..ಅದಕ್ಕಾಗಿ ಹೆಚ್ಎಸ್ಆರ್ ಲೇಔಟ್ ನಲ್ಲಿ ಒಂದು ಬಾಡಿಗೆ ಮನೆ ಮಡೆದು ಲಿವಿಂಗ್ ಟುಗೆದರ್ ನಲ್ಲಿದ್ರು..ವಿಚಾರ ಯುವಕ ತನ್ನ ಕುಟುಂಬಸ್ಥರಿಗೂ ಹೇಳಿದ್ದ.ಮದುವೆಗೂ ಸಮ್ಮತಿಸಿದ್ರು..ಆದ್ರೆ ಯುವತಿ ಕುಟುಂಬಸ್ಥರಿಗೆ ವಿಷಯ ತಿಳಿತಿದ್ದಂತೆ ಕಣ್ಣು ಕೆಂಪಾಗಿತ್ತು..

ವಿಚಾರ ಗೊತ್ತಾಗ್ತಿದ್ದಂತೆ ಜುಲೈ 11 ನೇ ತಾರೀಖು ರಾತ್ರಿ 9.30 ಲ್ಕೆ ಮನೆ ಬಳಿಗೆ ಆಗಮಿಸಿದ್ದ ಕುಟುಂಬಸ್ಥರಾದ ಹೇಮಂತ್,ದೀಕ್ಷಿತ್,ರವಿಕುಮಾರ್,ಯಶೋಧ ಮತ್ತು ಅಂಜಲಿ ಇಬ್ಬರು ಒಟ್ಟಿಗೆ ಇದ್ದಿದನ್ನ ಗಮನಿಸಿದ್ದಾರೆ.. ಇಬ್ಬರನ್ನು ರೂಮ್ ನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ.ನಂತರ ಐಶ್ವರ್ಯ ನನ್ನ ಎಳೆದು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ..ಇದರಿಂದ ಒಬ್ಬಂಟಿಯಾಗಿದ್ದ ಮಣಿಕಂಠ ನೊಂದು ಹೋಗಿದ್ದ..ಯುವತಿಗೆ ಕರೆ ಮಾಡಿದ್ದವನೇ ಮನೆಯಲ್ಲಿರೊ ಬೆಕ್ಕಿನ ಮರಿಯನ್ನ ಚನ್ನಾಗಿ ನೋಡ್ಕೊ ಎಂದಿದ್ದ..ಬಳಿ ಇಲ್ಲಿಂದ ತಮಿಳುನಾಡಿಗೆ ಹೊರಟವನು ಜುಲೈ 13 ರಂದು ತಮಿಳುನಾಡಿನ ಜೋಲಾರಪೇಟೆಗೆ ತೆರಳಿದ್ದ ಮಣಿಕಂಠ ತನ್ನ ತಾಯಿಗೆ ವಾಯ್ಸ್ ಮೆಸೆಜ್ ಮೂಲಕ ಕ್ಷಮೆ ಕೇಳಿ.ಲೊಕೇಶನ್ ಕಳುಹಿಸಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ..

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಜೋಲಾರಪೇಟೆ ರೈಲ್ವೇ ಪೊಲೀಸರು ಘಟನೆ ನಡೆದ ಆಧಾರದ ಮೇಲೆ ಹೆಚ್ಎಸ್ಆರ್ ಲೇಔಟ್ ಗೆ ಕೇಸ್ ಅನ್ನು ಸೆಪ್ಟೆಂಬರ್ 21 ರಂದು ವರ್ಗಾಯಿಸಿದ್ರು.ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಯುವತಿ ಸಂಬಂಧಿಕರಾದ ಹೇಮಂತ್,ದೀಕ್ಷಿತ್,ಚಿಕ್ಕಪ್ಪ ರವಿಕುಮಾರ್ ಬಂಧಿಸಿದ್ದಾರೆ.ಉಳಿದ ಇಬ್ಬರು ಆರೋಪಿಗಳಾದ ಯಶೋಧ ಮತ್ತು ಅಂಜಲಿ ಪತ್ತೆಗೆ ಬಲೆ ಬೀಸಿದ್ದಾರೆ. ಇಷ್ಟಾದರು ಕುಟುಂಬಸ್ಥರನ್ನು ಬಿಟ್ಟು ಪ್ರತ್ಯೇಕವಾಗು ವಾಸಿಸುತ್ತಿರುವ ಯುವತಿ ಪ್ರಿಯತಮನನ್ನ ನೆನೆದು ಪ್ರತಿನಿತ್ಯ ಕಣ್ಣೀರು ಹಾಕ್ತಿದ್ದಾಳೆ.ಮಣಿಕಂಠನ ಸಾವಿನ ನ್ಯಾಯಕ್ಕಾಗಿ ಕಾನೂನಿನ ಹೋರಾಟ ಮಾಡ್ತಿದ್ದಾಳೆ..

LEAVE A REPLY

Please enter your comment!
Please enter your name here