Home Uncategorized ಪ್ರೀತಿಸಿದ ಹುಡುಗಿಯ ಬೈಕ್ ಸುಟ್ಟು ಹಾಕಿದ ಪಾಗಲ್ ಪ್ರೇಮಿ

ಪ್ರೀತಿಸಿದ ಹುಡುಗಿಯ ಬೈಕ್ ಸುಟ್ಟು ಹಾಕಿದ ಪಾಗಲ್ ಪ್ರೇಮಿ

26
0

ಬೆಂಗಳೂರು: ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟ ಘಟನೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಕ್ರಮ್ ಎಂಬ ಪಾಗಲ್ ಪ್ರೇಮಿಯಿಂದ ಈ ಕೃತ್ಯ ಎಸಗಲಾಗಿದ್ದು, ಬೈಕ್​ಗೆ ಬೆಂಕಿ ಹಚ್ಚಿ  ಪರಾರಿಯಾಗುವ (Lover sets bike on fire) ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಕೃತ್ಯ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಈ ಹಿಂದೆ ಡ್ರಗ್ಸ್ ಕೇಸ್ (Drug Case)​ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಕ್ರಮ್ ಕೆಲವು ತಿಂಗಳು ಜೈಲು ಪಾಲಾಗಿದ್ದನು.

ನಗರದ ಬಿಟಿಎಂ ಲೇಔಟ್, ಮಡವಾಳ, ಕೊರಮಂಗಲ ಕಡೆಗಳಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿಕೊಂಡಿದ್ದ ಆರೋಪಿ ವಿಕ್ರಮ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್​ನಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದನು.

ಇದನ್ನೂ ಓದಿ: KPTCL ನೇಮಕಾರಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್

ಡ್ರಗ್ಸ್ ಪ್ರಕರಣದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ ವಿಕ್ರಮ್​ಗೆ ಜೈಲಿನಿಂದ ಬಿಡುಗಡೆಯಾದ ನಂತರ ತಾನು ಪ್ರೀತಿಸುತ್ತಿದ್ದ ಯುವತಿ ಮೇಲೆ ಅನುಮಾನ ಹುಟ್ಟಿಕೊಂಡಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿಯೇ ಡ್ರಗ್ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಅನುಮಾನಿಸಿದ ವಿಕ್ರಮ್ ಈ ಕೃತ್ಯ ಎಸಗಿದ್ದಾನೆ. ಜೈಲಿನಿಂದ ಹೊರಗಡೆ ಬಂದ ವಿಕ್ರಮ್ ಪ್ರೇಯಸಿಯ ಬೈಕ್ ಸುಟ್ಟು ಹಾಕಿ ಎಸ್ಕೇಪ್ ‌ಅಗವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದ್ದು, ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದ ಹಲಸೂರು ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ‌ ವಿಕ್ರಮ್​ನನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here