ಹೊಸದಿಲ್ಲಿ : ಬಂಗಾಳ ವಾರಿಯರ್ಸ್ ವಿರುದ್ಧ ಚೆನ್ನೈನಲ್ಲಿ ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ನಲ್ಲಿ ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್ 1000 ರೈಡ್ ಪಾಯಿಂಟ್ಸ್ ಪೂರೈಸಿದ್ದಾರೆ.
ಪ್ರದೀಪ್ ನರ್ವಾಲ್, ಮಣಿಂದರ್ ಸಿಂಗ್, ಪವನ್ ಸೆಹ್ರಾವತ್, ರಾಹುಲ್ ಚೌಧರಿ ಹಾಗೂ ದೀಪಕ್ ಹೂಡಾ ನಂತರ ಲೀಗ್ನಲ್ಲಿ ಈ ಸಾಧನೆ ಮಾಡಿದ ಆರನೇ ಆಟಗಾರನಾಗಿದ್ದಾರೆ.
ಸೋಮವಾರದ ಸ್ಪರ್ಧೆಯ ಮೊದಲು ತನ್ನ ಹೆಸರಲ್ಲಿ 990 ಪಾಯಿಂಟ್ಸ್ ಹೊಂದಿದ್ದ ನವೀನ್ ಸೂಪರ್-10 ದಾಖಲಿಸಿ ವಿಶೇಷ ಕ್ಲಬ್ಗೆ ಸೇರ್ಪಡೆಯಾದರು. ನವೀನ್ ಪಂದ್ಯದಲ್ಲಿ ನಾಲ್ಕು ಬೋನಸ್ ಪಾಯಿಂಟ್ಸ್ ಸಹಿತ ಒಟ್ಟು 11 ಪಾಯಿಂಟ್ಸ್ ಗಳಿಸಿದರು.
ನವೀನ್ ಎಕ್ಸ್ಪ್ರೆಸ್ ಎಂಬ ಅಡ್ಡಹೆಸರು ಹೊಂದಿರುವ ರೈಡರ್ ನವೀನ್ ಲೀಗ್ನ ಏಳನೇ ಹಾಗೂ ಎಂಟನೇ ಆವೃತ್ತಿಗಳಲ್ಲಿ ಅತ್ಯಂತ ಮೌಲ್ಯಯುತ ಆಟಗಾರನಾಗಿ ಆಯ್ಕೆಯಾಗಿದ್ದರು. 8ನೇ ಆವೃತ್ತಿಯಲ್ಲಿ ಡೆಲ್ಲಿ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದರು. ಪ್ರೊ ಕಬಡ್ಡಿ ಲೀಗ್ನ 7ನೇ ಆವೃತ್ತಿಯಲ್ಲಿ ಫೈನಲ್ಗೆ ತಲುಪಿದ್ದ ನವೀನ್ ನೇತೃತ್ವದ ಡೆಲ್ಲಿ ಸ್ವಲ್ಪದರಲ್ಲೇ ಪ್ರಶಸ್ತಿ ವಂಚಿತವಾಯಿತು.