Home Uncategorized ಫುಟ್‍ಬಾಲ್ ಆಟಗಾರ ಟೆಂಪಲ್ ಪಾಯಿಂಟ್ ಸ್ಟೈಲ್‍ನ್ನು ಅನುಕರಿಸಿದ ಜಸ್‍ಪ್ರೀತ್ ಬುಮ್ರಾ: ಯಾಕಂತೀರಾ?

ಫುಟ್‍ಬಾಲ್ ಆಟಗಾರ ಟೆಂಪಲ್ ಪಾಯಿಂಟ್ ಸ್ಟೈಲ್‍ನ್ನು ಅನುಕರಿಸಿದ ಜಸ್‍ಪ್ರೀತ್ ಬುಮ್ರಾ: ಯಾಕಂತೀರಾ?

12
0

ನವದೆಹಲಿ: ಅಫ್ಘಾನ್ (Afghanistan) ವಿರುದ್ಧದ ಪಂದ್ಯದ ವೇಳೆ ಜದ್ರಾನ್ ವಿಕೆಟ್ ಪಡೆದು ಹೆಸರಾಂತ ಫುಟ್‍ಬಾಲ್ ಆಟಗಾರ ಮಾರ್ಕಸ್ ರಾಶ್ಫೋರ್ಡ್ ಅವರ ಟೆಂಪಲ್ ಪಾಯಿಂಟ್ ಸ್ಟೈಲ್‍ನ್ನು ಟೀಂ ಇಂಡಿಯಾ (Team India) ಆಟಗಾರ ಜಸ್‍ಪ್ರೀತ್ ಬುಮ್ರಾ (Jasprit Bumrah) ಅನುಸರಿಸಿ ಸಂಭ್ರಮಿಸಿದ್ದಾರೆ.

https://www.instagram.com/reel/CyQOHgLvY97/?utm_source=ig_web_copy_link

ನವದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದ ಏಳನೇ ಓವರ್‌ನಲ್ಲಿ ಬುಮ್ರಾ ವಿಕೆಟ್ ಪಡೆದರು. ಇಬ್ರಾಹಿಂ ಜದ್ರಾನ್ 22(28 ಎಸೆತ) ಅವರ ಕ್ಯಾಚ್‍ನ್ನು ಕೊಹ್ಲಿ ಪಡೆದು ಔಟ್ ಮಾಡಿದರು. ಈ ವೇಳೆ ಸಂಭ್ರಮಿಸುವಾಗ ಬುಮ್ರಾ ತಲೆಯತ್ತ ಬೆರಳು ಮಾಡಿ ತೋರಿಸಿದರು.

ಬುಮ್ರಾ ಒಬ್ಬ ದೊಡ್ಡ ಫುಟ್‍ಬಾಲ್ ಅಭಿಮಾನಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ಇಂಗ್ಲೆಂಡ್‍ಗೆ ತೆರಳಿದ್ದ ವೇಳೆ ಓಲ್ಡ್ ಟ್ರಾಫರ್ಡ್ ಅವರನ್ನು ಭೇಟಿ ಮಾಡಿದ್ದರು. ಇತ್ತೀಚೆಗೆ ಹೆಸರಾಂತ ಫುಟ್ಬಾಲ್ ಆಟಗಾರ ಝ್ಲಾಟಾನ್ ಇಬ್ರಾಹಿಮೊವಿಕ್ ಅವರು ನಿವೃತ್ತರಾದ ಬಳಿಕ ಪೋಸ್ಟ್ ಒಂದನ್ನು ಬರೆದು `ನೀವು ನಿರಂತರ ಸ್ಫೂರ್ತಿಯ ಮೂಲ’ ಎಂದು ಕರೆದಿದ್ದರು.

The post ಫುಟ್‍ಬಾಲ್ ಆಟಗಾರ ಟೆಂಪಲ್ ಪಾಯಿಂಟ್ ಸ್ಟೈಲ್‍ನ್ನು ಅನುಕರಿಸಿದ ಜಸ್‍ಪ್ರೀತ್ ಬುಮ್ರಾ: ಯಾಕಂತೀರಾ? appeared first on Ain Live News.

LEAVE A REPLY

Please enter your comment!
Please enter your name here