ಶಾರ್ಜಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದಶಮಾನೋತ್ಸವ ಪ್ರಯುಕ್ತ ಫೆ. 11ರಂದು ಶಾರ್ಜಾದ ಅಲ್ ಬತ್ತೆಯ್ಯ ಪಾರ್ಕ್ ನಲ್ಲಿ ʼಮಹಬ್ಬ ಫ್ಯಾಮಿಲಿ ಫೆಸ್ಟ್ -24ʼ ನಡೆಯಲಿದೆ.
ನಫೀಸ್ ಗ್ರೂಪ್ ನ ಚೈರ್ಮನ್ ಅಬುಸ್ವಾಲಿ ಹಾಜಿ ಅವರ ನಿವಾಸದಲ್ಲಿ ಕೆ.ಸಿ.ಫ್ ನಾಯಕರಿಂದ ಆಮಂತ್ರಿಸಲಾಯಿತು. ಸಭೆಯಲ್ಲಿ ಕೆ.ಸಿ.ಎಫ್ ಯು.ಎ.ಇ ಮಹಬ್ಬ ಸ್ವಾಗತ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೆಳ್ಳಾರೆ, ಕೆ.ಸಿ.ಎಫ್ ನ ಯು.ಎ.ಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸಹಾಜಿ ಬಸರ, ಕೆ.ಸಿ.ಎಫ್ ಮಹಬ್ಬ ಸ್ವಾಗತ ಸಮಿತಿ ಕೋಶಾಧಿಕಾರಿ ಶುಕೂರ್ ಹಾಜಿ ಉಳ್ಳಾಲ, ಉದ್ಯಮಿಗಳಾದ ಅಬುಸ್ವಾಲಿ ಹಾಜಿ, ಮನ್ಸೂರ್ ಅಝದ್, ಮಮ್ತಾಝ್ ಅಲಿ, ಬ್ಯಾರಿ ಕಲ್ಚರಲ್ ಫೋರಂ ಅಧ್ಯಕ್ಷರಾದ ಡಾ. ಯೂಸುಫ್, ಲತೀಫ್ ಮುಲ್ಕಿ, ಇಬ್ರಾಹಿಂ ಹಾಜಿ ಗಡಿಯಾರ್, ಅಬ್ದುಲ್ ಸಮದ್ ಹಾಜಿ, ಜಾವೀದ್ ಹಾಜಿ ಉಪಸ್ಥಿತರಿದ್ದರು.
ಖಯಿರತ್ ಅಲ್ ಶಮ್ಸ್ ಕಾಂಟ್ರಾಕ್ಟ್ಯಿಂಗ್ ಕಂಪನಿ ದುಬೈ ಇದರ ಮಾಲಕರಾದ ಆಶ್ರಫ್ ಶಾ ಮಂತೂರ್ ಹಾಗೂ ಉಲಮಾ, ಉಮಾರ ನೇತಾರರುಗಳನ್ನು ಆಮಂತ್ರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.