Home Uncategorized ಫೇಸ್ ಬುಕ್ ನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಮತ್ತೆ ಡಿ. ರೂಪಾ ಫೋಸ್ಟ್!

ಫೇಸ್ ಬುಕ್ ನಲ್ಲಿ ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಮತ್ತೆ ಡಿ. ರೂಪಾ ಫೋಸ್ಟ್!

48
0

ಮೈಸೂರು ಎಟಿಐನಿಂದ ರೋಹಿಣಿ ರೋಹಿಣಿ ಸಿಂಧೂರಿ ತೆಗೆದುಕೊಂಡು ಹೋದ ಸರ್ಕಾರಿ ಸಾಮಾನುಗಳು ಡಿಸಿ ಮನೆಯಲ್ಲಿ ಕೂಡಾ ಇಲ್ಲ,  ಎಲ್ಲಿ ಹೋದವು ಎಂಬುದಾಗಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು:  ಐಪಿಎಸ್‌ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳ ಸದ್ಯಕ್ಕೆ ನಿಲ್ಲವ ಸೂಚನೆ ಕಾಣುತ್ತಿಲ್ಲ. ಯಾವುದೇ ಕಾರಣಕ್ಕೂ ಇನ್ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಇಬ್ಬರು ಉನ್ನತ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು.

ಆದರೆ, ಈ ನೋಟಿಸ್ ಗೂ  ‘ಡೋಂಟು ಕೇರ್’ ಎನ್ನದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೆ ಫೇಸ್ ಬುಕ್ ನಲ್ಲಿ ರೋಹಿಣಿ ವಿರುದ್ಧ ಫೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಐಎಎಸ್ Vs ಐಪಿಎಸ್: ಮಾನಹಾನಿಕರ ಹೇಳಿಕೆ ನೀಡದಂತೆ ಡಿ. ರೂಪಾಗೆ ಕೋರ್ಟ್ ನಿರ್ಬಂಧ

ತಮ್ಮ ಫೇಸ್ ಬುಕ್ ಖಾತೆಯಲ್ಲಿ ವರದಿಯೊಂದನ್ನು ಹಂಚಿಕೊಂಡಿರುವ  ಡಿ. ರೂಪಾ, ಮೈಸೂರು ಎಟಿಐನಿಂದ ರೋಹಿಣಿ  ಸಿಂಧೂರಿ ತೆಗೆದುಕೊಂಡು ಹೋದ ಸರ್ಕಾರಿ ಸಾಮಾನುಗಳು ಡಿಸಿ ಮನೆಯಲ್ಲಿ ಕೂಡಾ ಇಲ್ಲ,  ಎಲ್ಲಿ ಹೋದವು ಎಂಬುದಾಗಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ವಸ್ತು 50 ರೂಪಾಯಿ ಇರಲಿ,50 ಕೋಟಿ ಇರಲಿ, ತಪ್ಪು ತಪ್ಪೇ. 1000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗು, ಗುಮಾಸ್ತನಿಗು ಒಂದೇ ಎಂದು ಡಿ. ರೂಪಾ ಮೌದ್ಗಿಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here